ADVERTISEMENT

ಗ್ರಾಮೀಣರಿಗಾಗಿ ಸಂಚಾರಿ ಪ್ರಯೋಗಾಲಯ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2020, 19:13 IST
Last Updated 7 ಅಕ್ಟೋಬರ್ 2020, 19:13 IST
ಸೈಕಾರ್ಪ್ ಹೆಲ್ತ್‌ ಟೆಕ್ನಾಲಜೀಸ್ ಪ್ರೈ.ಲಿ ನಿರ್ಮಿಸಿರುವ ಸಂಚಾರಿ ಪ್ರಯೋಗಾಲಯಕ್ಕೆ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದರು
ಸೈಕಾರ್ಪ್ ಹೆಲ್ತ್‌ ಟೆಕ್ನಾಲಜೀಸ್ ಪ್ರೈ.ಲಿ ನಿರ್ಮಿಸಿರುವ ಸಂಚಾರಿ ಪ್ರಯೋಗಾಲಯಕ್ಕೆ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದರು   

ಬೆಂಗಳೂರು: ಗ್ರಾಮೀಣ ಭಾಗದ ಜನತೆಗೆ ಪರೀಕ್ಷೆ ನಡೆಸಲು ಸೈಕಾರ್ಪ್ ಹೆಲ್ತ್‌ ಟೆಕ್ನಾಲಜೀಸ್ ಪ್ರೈ.ಲಿ ಸಂಚಾರಿ ಪ್ರಯೋಗಾಲಯವನ್ನು ನಿರ್ಮಿಸಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದರು.

ಡಾ. ಕರ್ತೀಶ್ ಬೋಪಣ್ಣ, ಶಶಾಂಕ್ ಬಂಟ್ವಾಳ್ ಹಾಗೂ ಕೋದಂಡರಾಮ ರಾಮಯ್ಯ ಅವರು ಕರ್ನಾಟಕದಲ್ಲಿ ಈ ಪ್ರಯೋಗಾಲಯವನ್ನು ಪರಿಚಯಿಸಿದ್ದಾರೆ. ಈ ಸಂಚಾರಿ ಪ್ರಯೋಗಾಲವನ್ನು ಟ್ರ್ಯಾಕ್ಟರ್‌ ಸೇರಿದಂತೆ ವಿವಿಧ ವಾಹನಗಳ ಮೂಲಕ ಕಾರ್ಯಾಚರಣೆ ಮಾಡಬಹುದಾಗಿದೆ. ಆಸ್ಪತ್ರೆಗಳು ಇರದ ಗ್ರಾಮೀಣ ಪ್ರದೇಶಗಳಲ್ಲಿ ಈ ಪ್ರಯೋಗಾಲಯದ ನೆರವಿನಿಂದ ಪರೀಕ್ಷೆ ಮಾಡಲಾಗುತ್ತದೆ.

ರೋಗಿಗಳು ಆಸ್ಪತ್ರೆಗೆ ಅಲೆದಾಟ ನಡೆಸುವುದು ತಪ್ಪುವ ಜತೆಗೆ ಸಮಯಕ್ಕೆ ಸರಿಯಾಗಿ ಪರೀಕ್ಷೆ ಮಾಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ಮಾದರಿ ಪ್ರಯೋಗಾಲಯಗಳು ಇಂಗ್ಲೆಂಡ್ ಸೇರಿದಂತೆ ಮುಂದುವರಿದ ದೇಶಗಳಲ್ಲಿ ಸೇವೆ ಸಲ್ಲಿಸುತ್ತಿವೆ. ಇದೇ ಮೊದಲ ಬಾರಿಗೆ ದೇಶದಲ್ಲಿ ಕೂಡ ಪರಿಚಯಿಸಲಾಗುತ್ತಿದೆ. ಪರಿಸ್ಥಿತಿಗೆ ಅನುಗುಣವಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ.ಕಾರ್ಪೊರೇಟ್‌ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ (ಸಿಎಸ್‌ಆರ್‌) ರಾಜ್ಯ ಸರ್ಕಾರಕ್ಕೆ ಒಂದು ಸಂಚಾರಿ ಪ್ರಯೋಗಾಲಯವನ್ನು ನೀಡಲಾಗಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.