ADVERTISEMENT

ತುಪ್ಪ, ಮೊಸರು, ಪನ್ನೀರ್‌ ಕೊರತೆ

ಹಾಲು ಉತ್ಪಾದನೆಯಲ್ಲಿ ಕುಸಿತ l ಒಂದು ತಿಂಗಳಿನಿಂದ ಇಲ್ಲದ ಪೂರೈಕೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2023, 21:09 IST
Last Updated 30 ಮಾರ್ಚ್ 2023, 21:09 IST
z
z   

ಬೆಂಗಳೂರು: ಹಾಲು ಉತ್ಪಾದನೆ ಕುಸಿತವು ತುಪ್ಪ, ಮೊಸರು, ಪನ್ನೀರ್‌ ಸೇರಿದಂತೆ ಇತರ ಹಾಲಿನ ಉತ್ಪನ್ನಗಳಿಗೂ ತಟ್ಟಿದೆ.

ಕಳೆದ ಒಂದು ತಿಂಗಳಿಂದ ನಗರದಲ್ಲಿ ತುಪ್ಪ ಮತ್ತು ಮೊಸರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಹಾಲಿನ ಬೂತ್‌ಗಳಿಗೆ ನಿಯಮಿತವಾಗಿ ಪೂರೈಕೆಯಾಗುತ್ತಿಲ್ಲ.

ಬೇಸಿಗೆ, ಚರ್ಮ ಗಂಟು ರೋಗ, ಪಶು ಆಹಾರ ದರ ಹೆಚ್ಚಳ ಮುಂತಾದ ಕಾರಣಗಳಿಂದ ಹಾಲಿನ ಉತ್ಪಾದನೆ
ಯಲ್ಲಿ ಕುಸಿತವಾಗಿದೆ.

ADVERTISEMENT

‘ಬಮುಲ್‌ ವ್ಯಾಪ್ತಿಯಲ್ಲಿ ಕಳೆದ ಬೇಸಿಗೆಯಲ್ಲಿ ಪ್ರತಿದಿನ 15 ಲಕ್ಷ ಲೀಟರ್‌ ಹಾಲು ಉತ್ಪಾದನೆಯಾಗುತ್ತಿತ್ತು. →ಆದರೆ, ಈ ವರ್ಷ 13 ಲಕ್ಷ ಲೀಟರ್‌ ಉತ್ಪಾದನೆಯಾಗುತ್ತಿದೆ. ಸರ್ಕಾರ ಹಾಲಿಗೆ ಹೆಚ್ಚಿನ ದರ ನೀಡದ ಕಾರಣ ರೈತರು ಹೈನುಗಾರಿಕೆಯಿಂದ ದೂರ ಸರಿಯುತ್ತಿದ್ದಾರೆ. ಹಾಲಿನ ಉತ್ಪಾದನೆ ಕುಸಿತದಿಂದ ತುಪ್ಪದ ಉತ್ಪಾದನೆಯಲ್ಲಿ 10 ಪಟ್ಟು ಕಡಿಮೆಯಾಗಿದೆ’ ಎಂದು ಬಮುಲ್‌ ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದ್ದಾರೆ.

ಹೋಟೆಲ್‌ →ಉದ್ಯಮಕ್ಕೂ ಕೊರತೆಯ →ಬಿಸಿ ತಟ್ಟಿದೆ. ಇದರಿಂದಾಗಿ, ಕೆಲವು ಹೋಟೆಲ್‌ಗಳಲ್ಲಿ ಸಿಹಿ ತಿಂಡಿಗಳನ್ನು ತಯಾ
ರಿಸುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ಈ ಪರಿಸ್ಥಿತಿ ದುರುಪಯೋಗಪಡಿಸಿಕೊಂಡು ಕೆಲವು ಅಂಗಡಿಗಳಲ್ಲಿ ₹10ರಿಂದ ₹15ರಷ್ಟು ಹೆಚ್ಚು ದರಕ್ಕೆ ತುಪ್ಪ ಮಾರಾಟ ಮಾಡಲಾಗುತ್ತಿದೆ ಎಂದು ಗ್ರಾಹಕರು ದೂರಿದ್ದಾರೆ.

‘ಬೇಸಿಗೆ ಆರಂಭವಾಗಿದ್ದು, ಹಾಲಿನ ಬೇಡಿಕೆ ಶೇ 17ರಷ್ಟು ಹೆಚ್ಚಾಗಿದೆ. ಮೊಸರಿಗೆ ಬೇಡಿಕೆ ಶೇ 37ರಷ್ಟು ಹೆಚ್ಚಾಗಿದೆ. ಹಾಲು ಮತ್ತು ಮೊಸರು ಪೂರೈಕೆಗೆ ಆದ್ಯತೆ ನೀಡಿರುವುದರಿಂದ ತುಪ್ಪ ಮತ್ತು ಇತರ ಉತ್ಪನ್ನಗಳ ತಯಾರಿಕೆಯಲ್ಲಿ ಸ್ವಲ್ಪಮಟ್ಟಿಗೆ ವ್ಯತ್ಯಯವಾಗಿದೆ’ ಎಂದು ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ್‌ ಹೇಳುತ್ತಾರೆ.

‘ಕಳೆದ ವರ್ಷಕ್ಕೆ ಹೋಲಿಸಿದರೆ ಹಾಲಿನ ಉತ್ಪಾದನೆಯಲ್ಲಿ ಕೇವಲ ಶೇ 0.8ರಷ್ಟು ಮಾತ್ರ ಕುಸಿತವಾಗಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಬಹುದು. ದೇಶದಾದ್ಯಂತ ಹಾಲಿನ ಉತ್ಪಾದನೆಯಲ್ಲಿ ಕುಸಿತವಾಗಿದೆ. ಕೆಲವು ರಾಜ್ಯಗಳಲ್ಲಿ ಶೇ 3ರಷ್ಟು ಕುಸಿತವಾಗಿದೆ’ ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.