ADVERTISEMENT

ಫಲಪುಷ್ಪ ಪ್ರದರ್ಶನ: ಸಂಚಾರ ಮಾರ್ಗ ಬದಲು

​ಪ್ರಜಾವಾಣಿ ವಾರ್ತೆ
Published 16 ಜನವರಿ 2025, 17:06 IST
Last Updated 16 ಜನವರಿ 2025, 17:06 IST
<div class="paragraphs"><p>ಲಾಲ್‌ಬಾಗ್‌ನಲ್ಲಿ&nbsp; ಫಲಪುಷ್ಪ ಪ್ರದರ್ಶನ </p></div>

ಲಾಲ್‌ಬಾಗ್‌ನಲ್ಲಿ  ಫಲಪುಷ್ಪ ಪ್ರದರ್ಶನ

   

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಜನವರಿ 16ರಿಂದ 27ರವರೆಗೆ ಫಲಪುಷ್ಪ ಪ್ರದರ್ಶನ ಹಮ್ಮಿಕೊಂಡಿರುವುದರಿಂದ ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.

ಡೇರಿ ಸರ್ಕಲ್ ಕಡೆಯಿಂದ ಲಾಲ್‌ಬಾಗ್ ಕಡೆಗೆ ಬರುವ ವಾಹನಗಳು 10ನೇ ಕ್ರಾಸ್‌ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಸಿಟಿ ಮಾರುಕಟ್ಟೆ, ಮೆಜೆಸ್ಟಿಕ್‌ ಕಡೆಗೆ ವಿಲ್ಸನ್ ಗಾರ್ಡನ್‌ ಮುಖ್ಯ ರಸ್ತೆ ಹಾಗೂ ಬಿಟಿಎಸ್ ರಸ್ತೆಯ ಮೂಲಕ ಬಿಎಂಟಿಸಿ ರಸ್ತೆ ಕಡೆ ಸಾಗಬಹುದು.

ADVERTISEMENT

ಸುಬ್ಬಯ್ಯ ಸರ್ಕಲ್, ಸಿಟಿ ಮಾರುಕಟ್ಟೆ ಕಡೆಯಿಂದ ಲಾಲ್‌ಬಾಗ್‌, ಜಯನಗರ, ಎಲೆಕ್ಟ್ರಾನಿಕ್‌ ಸಿಟಿ, ಹೊಸೂರು ಕಡೆ ಸಂಚರಿಸುವ ವಾಹನಗಳು ಊರ್ವಶಿ ಜಂಕ್ಷನ್‌ನಲ್ಲಿ ನೇರ ಹಾಗೂ ಎಡ ತಿರುವು ಪಡೆದು ಸಿದ್ದಯ್ಯ ರಸ್ತೆ ಮೂಲಕ ಸಂಚರಿಸಿ ಡಾ.ಮರಿಗೌಡ ರಸ್ತೆ ಸಂಪರ್ಕಿಸಬಹುದು.

ಲಾಲ್‌ಬಾಗ್‌ ರಸ್ತೆ ಕಡೆಯಿಂದ ಹಾಗೂ ಮರಿಗೌಡ ರಸ್ತೆ ಕಡೆಯಿಂದ ಬರುವ ವಾಹನಗಳು ಲಾಲ್‌ಬಾಗ್ ಮುಖ್ಯ ದ್ವಾರದ ಬಳಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಬಹುದು ಮತ್ತು ಇಳಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.