ಲಂಗೋಟಿ ಮ್ಯಾನ್ ಚಿತ್ರ ಟ್ರೈಲರ್‌ನ ತುಣುಕು
ಬೆಂಗಳೂರು: ‘ಲಂಗೋಟಿ ಮ್ಯಾನ್ ಸಿನಿಮಾದ ಟೀಸರ್‌ನಲ್ಲಿ ಬ್ರಾಹ್ಮಣರನ್ನು ಅವಹೇಳನ ಮಾಡಿರುವ ಚಿತ್ರ ತಂಡವು ಸಮುದಾಯದ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಚಿತ್ರ ತಂಡದ ವಿರುದ್ಧ ಹೋರಾಟ ಅನಿವಾರ್ಯವಾಗಲಿದೆ’ ಎಂದು ಕೆಪಿಸಿಸಿ ವಕ್ತಾರ ಶಂಕರ ಗುಹಾ ದ್ವಾರಕನಾಥ್ ಹೇಳಿದ್ದಾರೆ.
‘ಸಂಜೋತಾ ಭಂಡಾರಿ ನಿರ್ದೇಶನದ ಈ ಚಿತ್ರದ ಟೀಸರ್‌ನಲ್ಲಿ, ಜನಿವಾರ ಧರಿಸಿದ ವ್ಯಕ್ತಿಯೋರ್ವ ಲಂಗೋಟಿಯಲ್ಲಿ ಓಡುತ್ತಿರುವ ಹಾಗೆ ಚಿತ್ರೀಕರಣ ಮಾಡಲಾಗಿದೆ. ಈ ಮೂಲಕ ಬ್ರಾಹ್ಮಣರನ್ನು ಹಾಗೂ ಬ್ರಾಹ್ಮಣರ ಪಾರಂಪರಿಕ ವಸ್ತ್ರಧಾರವನ್ನು ಟೀಕಿಸಿರುವುದು ಗಮನಕ್ಕೆ ಬಂದಿದೆ. ಯಾವುದೇ ಜಾತಿ ಹಾಗೂ ವರ್ಗದವರನ್ನು ನಿಂದಿಸುವುದು ತಪ್ಪು’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಈ ಚಲನಚಿತ್ರದ ನಿರ್ಮಾಪಕರು ಹಾಗೂ ನಿರ್ದೇಶಕರು ವಿವಾದಿತ ದೃಶ್ಯ ತೆಗೆಯಬೇಕು. ಯಾರ ಭಾವನೆಗೂ ಧಕ್ಕೆ ಬಾರದ ಹಾಗೆ ಸರಿಪಡಿಸಿ, ಕ್ಷಮೆ ಯಾಚಿಸಬೇಕು. ಇಲ್ಲವಾದಲ್ಲಿ ಅರ್ಚಕರ ಸಂಘದವರ ಜೊತೆಗೆ ನಿಂತು ತೀವ್ರ ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.