ADVERTISEMENT

ಬೆಂಗಳೂರು: ಲೇಖಕಿಯರ ಸಂಘದ ದತ್ತಿನಿಧಿ ಪ್ರಶಸ್ತಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 23:00 IST
Last Updated 1 ಸೆಪ್ಟೆಂಬರ್ 2025, 23:00 IST
   

ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘದ 2024ನೇ ಸಾಲಿನ ವಿವಿಧ ದತ್ತಿ ಪ್ರಶಸ್ತಿಗಳು ಪ್ರಕಟವಾಗಿವೆ. ನಿರ್ಮಲಾ ಶೆಟ್ಟರ್‌ ಅವರಿಗೆ ಕೆ.ಟಿ. ಬನಶಂಕರಮ್ಮ ಪ್ರಶಸ್ತಿ, ಪ್ರೇಮಾ ಭಟ್ ಮತ್ತು ಎ.ಎಸ್.ಭಟ್ ಪ್ರಕಾಶಕಿ ಪ್ರಶಸ್ತಿಗೆ ಸುಧಾ ಚಿದಾನಂದಗೌಡ ಅವರು ಆಯ್ಕೆಯಾಗಿದ್ದಾರೆ.

ಭಾಗ್ಯ ನಂಜಪ್ಪ ವಿಜ್ಞಾನ ಸಾಹಿತ್ಯ ಪ್ರಶಸ್ತಿಗೆ ಕೆ.ಎಸ್. ಚೈತ್ರಾ ಅವರ ‘ದಂತ ಕಥೆಗಳು’, ಜಿ.ವಿ. ನಿರ್ಮಲ ಅನುವಾದ ಸಾಹಿತ್ಯ ಪ್ರಶಸ್ತಿಗೆ ವಿಜಯಾ ಶಂಕರ್ ಅವರ ‘ಮನೋಜ್ಞ’ ಕಾದಂಬರಿ, ಉಷಾ. ಪಿ.ರೈ ಆತ್ಮಕಥನ ಪ್ರಶಸ್ತಿಗೆ ಎಚ್.ಆರ್. ಲೀಲಾವತಿ ಅವರ ‘ಹಾಡಾಗಿ ಹರಿದಾಳೆ’, ನಾಗರತ್ನ ಚಂದ್ರಶೇಖರ್ ಲಲಿತ ಪ್ರಬಂಧ ಪ್ರಶಸ್ತಿಗೆ ಸವಿತಾ ಮಾಧವ ಶಾಸ್ತ್ರಿ ಗುಂಡ್ಮಿ ಅವರ ‘ನೀರ್ ದೋಸೆ’ ಕೃತಿಗಳು ಆಯ್ಕೆಯಾಗಿವೆ.

ಬಿ.ಸಿ. ಶೈಲಾ ನಾಗರಾಜ್ ಕಾವ್ಯ ಪ್ರಶಸ್ತಿಗೆ ಪಿ. ಭಾರತಿದೇವಿ ಅವರ ‘ಚಲಿಸುತ್ತಿವೆ ಚುಕ್ಕಿಗಳು’, ಬ್ಯಾಡಗಿ ಸಂಕಮ್ಮ ಕಾವ್ಯ ಪ್ರಶಸ್ತಿಗೆ  ಗೀತಾ ವಸಂತ ಅವರ ‘ಪ್ರಾಣಪಕ್ಷಿಯ ರೆಕ್ಕೆ’, ಶ್ರೀಜಯ ಕಲಕೋಟಿ ಪ್ರಶಸ್ತಿಗೆ ಮೀನಾಕ್ಷಿ ಬಾಳಿ ಅವರ ‘ವಚನ ನಿಜದರ್ಶನ’, ಸುಶೀಲಾ ಸೋಮಶೇಖರ್ ಪ್ರಶಸ್ತಿಗೆ ಸುಶೀಲಾ ಸದಾಶಿವಯ್ಯ ಅವರ ‘ಜಗದ ಸದಾಶಿವಯ್ಯ’, ಲಕ್ಷ್ಮಿದೇವಮ್ಮ ಕಥಾ ಪ್ರಶಸ್ತಿಗೆ ವಿದ್ಯಾ ಭರತನಹಳ್ಳಿ ಅವರ ‘ಬೇಸೂರ್’, ನಿರುಪಮಾ ಕಥಾ ಪ್ರಶಸ್ತಿಗೆ ರಾಜಶ್ರೀ ಟಿ. ರೈ ಪೆರ್ಲ ಅವರ ‘ನೀ ಮಾಯೆಯೊಳಗೋ ನಿನ್ನೊಳು ಮಾಯೆಯೊ’, ಎಲ್.ಗಿರಿಜಾರಾಜ್ ಅವರ ‘ಪಾರೋತಿಯ ಶಿವ’ ಹೊತ್ತಗೆಗಳು ಆಯ್ಕೆಯಾಗಿವೆ.

ADVERTISEMENT

ತ್ರಿವೇಣಿ ದತ್ತಿನಿಧಿ ಪ್ರಶಸ್ತಿಗೆ ಸುಜಾತ ಛಲವಾದಿ ಅವರ ‘ಲಚಮವ್ವ’ (ಪ್ರಥಮ), ರೇಣುಕಾ ಕೋಡಗುಂಟಿ ಅವರ ‘ಚಿಗುರೊಡೆದ ಬೇರು’ (ದ್ವಿತೀಯ), ಸ್ಮಿತಾ ಅಮೃತರಾಜ್ ಸಂಪಾಜೆ ಅವರ ‘ಹಾಯ್ ಮೆಟಾಯ್’ (ತೃತೀಯ), ಕಾಕೋಳು ಸರೋಜಮ್ಮ ಕಾದಂಬರಿ ಪ್ರಶಸ್ತಿಗೆ ಬಿ.ಆರ್. ನಾಗರತ್ನ ಅವರ ‘ಕಾಲಗರ್ಭ’, ಕಮಲಾ ರಾಮಸ್ವಾಮಿ ಪ್ರವಾಸ ಸಾಹಿತ್ಯ ಪ್ರಶಸ್ತಿಗೆ ಕೆ.ವಿ. ರಾಜೇಶ್ವರಿ ಅವರ ‘ಕಿವಿ- ಕಾಂಗರೂಗಳ ನಡುವೆ’, ನುಗ್ಗೆಹಳ್ಳಿ ಪಂಕಜ ಹಾಸ್ಯ ಕೃತಿಗೆ ಶೃತಿ ಗದ್ದೆಗಲ ಅವರ ‘ಹಳದಿ ಕ್ಯಾಪ್ ಸುಂದರಿ’, ಗುಣಸಾಗರಿ ನಾಗರಾಜ್ ಮಕ್ಕಳ ಸಾಹಿತ್ಯ ಪ್ರಶಸ್ತಿಗೆ ಲಲಿತಾ ಕೆ.ಹೊಸಪ್ಯಾಟಿ ಅವರ ‘ನದಿ ನದಿ ಎಲ್ಲಿ ಹೋತು’, ಇಂದಿರಾ ವಾಣಿರಾವ್ ನಾಟಕ ಪ್ರಶಸ್ತಿಗೆ ಅಕ್ಷತಾ ರಾಜ್ ಪೆರ್ಲ ಅವರ ‘ನೆಲ ಉರುಳು’, ತ್ರಿವೇಣಿ ಸಾಹಿತ್ಯ ಪುರಸ್ಕಾರಕ್ಕೆ (ಸುಧಾಮೂರ್ತಿ ಪ್ರಾಯೋಜಿತ) ಎ.ಜಿ. ರತ್ನ ಕಾಳೇಗೌಡ ಅವರ ‘ಪಂಚಾಯಿತಿ ಅಧ್ಯಕ್ಷೆ ಪುಟ್ಟಕ್ಕ’ ಕಾದಂಬರಿ, ಶ್ರೀಲೇಖಾ ಕವಿತೆ ಪ್ರಶಸ್ತಿಗೆ ಪ್ರತಿಭಾ ಪಾಟೀಲ ಅವರ ‘ಸಿಂಬಿ’, ಜಯಮ್ಮ ಕರಿಯಣ್ಣ ಸಂಶೋಧನೆ ಪ್ರಶಸ್ತಿಗೆ ವಿದುಷಿ ಶ್ಯಾಮಲಾ ಪ್ರಕಾಶ್ ‘ಮಾತಿನೊಳಗಣ ಧಾತು’ ಕೃತಿಗಳು ಆಯ್ಕೆಯಾಗಿವೆ.

ಆಯ್ಕೆ ಸಮಿತಿಯಲ್ಲಿ ಎನ್. ಸಂಧ್ಯಾರಾಣಿ, ಶಾಂತರಾಜು, ವಿದ್ಯಾರಶ್ಮಿ ಪೆಲ್ಲತ್ತಡ್ಕ ಇದ್ದರು. ಪ್ರಶಸ್ತಿ ಪ್ರದಾನ ಸಮಾರಂಭ ಸೆ. 13ರಂದು ನಯನ ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷೆ ಡಾ. ಎಚ್.ಎಲ್.ಪುಷ್ಪ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.