ADVERTISEMENT

ದಾಬಸ್ ಪೇಟೆ: ಚಿರತೆ ದಾಳಿಗೆ ನಾಯಿ ಬಲಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 21:57 IST
Last Updated 27 ಡಿಸೆಂಬರ್ 2025, 21:57 IST
ಚಿರತೆ ದಾಳಿಗೆ ಸಿಲುಕಿ ಸತ್ತು ಬಿದ್ದಿರುವ ನಾಯಿ
ಚಿರತೆ ದಾಳಿಗೆ ಸಿಲುಕಿ ಸತ್ತು ಬಿದ್ದಿರುವ ನಾಯಿ   

ದಾಬಸ್ ಪೇಟೆ: ಶಿವಗಂಗೆ ಪಂಚಾಯಿತಿ ವ್ಯಾಪ್ತಿಯ ಗೌರಾಪುರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಚಿರತೆಯೊಂದು ನಾಯಿಯನ್ನು ಸಾಯಿಸಿದೆ.

ಗ್ರಾಮದ ಬಸವಣ್ಣ ದೇವಾಲಯದ ಹಿಂಭಾಗದಲ್ಲಿ ಚಿರತೆಯು ನಾಯಿಯನ್ನು ಹಿಡಿದು, ಎಳೆದುಕೊಂಡು ಹೋಗಿ ಒಂದಷ್ಟು ದೂರದಲ್ಲಿ ಬಿಟ್ಟು ಹೋಗಿದೆ.

ನಾರಾಯಣಪ್ಪ ಅವರ ಮನೆಯ ಬೀದಿಯಲ್ಲಿ ಈ ನಾಯಿ ಇರುತ್ತಿತ್ತು. ಹೀಗಾದರೆ ದನ–ಕರು, ಕುರಿ–ಮೇಕೆ ಸಾಕುವುದು ಹೇಗೆ ಎಂದು ಗ್ರಾಮದ ರುದ್ರೇಶ್ ಪ್ರಶ್ನಿಸಿದರು. 

ADVERTISEMENT

‘ಇತ್ತೀಚೆಗೆ ಶಿವಗಂಗೆ ಸುತ್ತಮುತ್ತ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು, ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡುತ್ತಿವೆ. ಸಂಜೆಯಿಂದಲೇ ಒಂಟಿಯಾಗಿ ಓಡಾಡಲು ಭಯವಾಗುತ್ತಿದೆ’ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.