ADVERTISEMENT

ಬೆಂಗಳೂರು: ಆಸ್ತಿಗಾಗಿ ತಾಯಿ ಕೊಂದ ಪುತ್ರನಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2023, 23:30 IST
Last Updated 20 ಡಿಸೆಂಬರ್ 2023, 23:30 IST
<div class="paragraphs"><p><strong>ಸಾಂದರ್ಭಿಕ ಚಿತ್ರ</strong></p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಆಸ್ತಿಗಾಗಿ ತಾಯಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಪುತ್ರನಿಗೆ ಸಿಟಿ ಸಿವಿಲ್‌ ಹಾಗೂ ಸೆಷನ್ಸ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಶ್ರೀರಾಮಪುರದ ನಿವಾಸಿ ಶರತ್ ಕುಮಾರ್‌ ಶಿಕ್ಷೆಗೆ ಒಳಗಾದ ಅಪರಾಧಿ.

ADVERTISEMENT

‘ಅಪರಾಧಿ ವಿಪರೀತವಾಗಿ ಮದ್ಯ ಸೇವಿಸುತ್ತಿದ್ದ. ಕುಡಿತದ ಚಟಕ್ಕೆ ಹಣ ನೀಡುವಂತೆ ತಾಯಿ ಬಳಿ ಬಲವಂತ ಮಾಡುತ್ತಿದ್ದ. ಹಣ ಕೊಡದಿದ್ದರೆ ಮದುವೆ ಮಾಡು ಎಂದು ಪೀಡಿಸುತ್ತಿದ್ದ. ಅದಾದ ಮೇಲೆ ಮನೆ ಮಾರಾಟ ಮಾಡುವಂತೆ ಒತ್ತಾಯ ಹೇರುತ್ತಿದ್ದ. ನನ್ನ ಉಸಿರು ನಿಂತರೂ ಮನೆ ಮಾರಾಟ ಮಾಡುವುದಿಲ್ಲ ಎಂದು ತಾಯಿ ಹೇಳಿದ್ದರು. ಶಾಶ್ವತವಾಗಿಯೇ ಉಸಿರು ನಿಲ್ಲಿಸುತ್ತೇನೆ ಎಂದು ಹೇಳಿದ್ದ ಅಪರಾಧಿ, 2018ರ ಜೂನ್‌ 13ರಂದು ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಅದಾದ ಮೇಲೆ ಕೊಲೆ ಮಾಡಿಲ್ಲ ಎಂದು ನಾಟಕವಾಡಿದ್ದ’ ಎಂದು ಮೂಲಗಳು ಹೇಳಿವೆ.

ನ್ಯಾಯಾಧೀಶರಾದ ಎಂ.ಎಸ್.ಕಲ್ಪನಾ ಅವರು ಶಿಕ್ಷೆ ಪ್ರಕಟಿಸಿ ಆದೇಶ ಹೊರಡಿಸಿದ್ದಾರೆ. ಸರ್ಕಾರಿ ವಕೀಲರಾಗಿ ಎಂ.ವಿ.ತ್ಯಾಗರಾಜ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.