ADVERTISEMENT

ಅಕ್ರಮ ಮದ್ಯ ಮಾರಾಟ: ಬಂಧನ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2020, 17:09 IST
Last Updated 31 ಡಿಸೆಂಬರ್ 2020, 17:09 IST
ಜಪ್ತಿ ಮಾಡಲಾದ ಮದ್ಯದ ಜೊತೆ ಆರೋಪಿ
ಜಪ್ತಿ ಮಾಡಲಾದ ಮದ್ಯದ ಜೊತೆ ಆರೋಪಿ   

ಬೆಂಗಳೂರು: ವಾಯುಸೇನೆ ಕ್ಯಾಂಟಿನ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಖರೀದಿಸಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರೋಪದಡಿ ಮಣಿ (60) ಎಂಬುವರನ್ನು ಪಶ್ಚಿಮ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

‘ರಿಯಲ್ ಎಸ್ಟೇಟ್ ಉದ್ಯಮಿಯಾದ ಮಣಿ, ಮೇಕ್ರಿ ವೃತ್ತ ಬಳಿ ಇರುವ ವಾಯುಸೇನೆ ಕ್ಯಾಂಟಿನ್‌ಗೆ ಹೋಗಿ ಮದ್ಯ ಖರೀದಿ ಮಾಡಿದ್ದರು. ಹೊಸ ವರ್ಷಾಚರಣೆಗೆ ಮಾರಾಟ ಮಾಡಲೆಂದು ಹೊರಟಿದ್ದರು. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಬಸವೇಶ್ವರನಗರ ಹಾಗೂ ಮಾಗಡಿ ರಸ್ತೆ ಪೊಲೀಸರು, ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಸೆರೆ ಹಿಡಿದಿದ್ದಾರೆ’ ಎಂದು ಡಿಸಿಪಿ ಸಂಜೀವ್ ಪಾಟೀಲ ಹೇಳಿದರು.

‘ಬಂಧಿತರಿಂದ ಬ್ಲ್ಯಾಕ್‌ ಆ್ಯಂಡ್‌ ವೈಟ್ ಕಂಪನಿಯ 26 ಬಾಟಲ್, ಪೇಪರ್ಸ್ 55 ಬಾಟಲ್, ಪೀಟರ್ ಸ್ಕ್ವಾಚ್ 15 ಬಾಟಲ್, ಪ್ರೈಡ್ಸ್ 13 ಬಾಟಲ್ ಹಾಗೂ ಎಂ.ಸಿ ರಾಯ್ಸ್ 5 ಬಾಟಲ್‌ಗಳು ಸೇರಿದಂತೆ ಒಟ್ಟು 85 ಲೀಟರ್ ಮದ್ಯ ಜಪ್ತಿ ಮಾಡಲಾಗಿದೆ. ಪ್ರತಿ ಬಾಟಲ್‌ಗಳು 750 ಎಂ.ಎಲ್ ಇವೆ’ ಎಂದೂ ಅವರು ತಿಳಿಸಿದರು.

ADVERTISEMENT

‘ಸೇನೆ ಕ್ಯಾಂಟಿನ್‌ನಲ್ಲಿ ಇಷ್ಟು ಪ್ರಮಾಣದಲ್ಲಿ ಮದ್ಯ ಹೇಗೆ ಸಿಕ್ಕಿತು, ಇದರ ಹಿಂದೆ ಯಾರೆಲ್ಲ ಇದ್ದಾರೆ ಎಂಬುದನ್ನು ತಿಳಿದುಕೊಳ್ಳಲು ತನಿಖೆ ಮುಂದುವರಿಸಲಾಗಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.