ADVERTISEMENT

ಸಾಹಿತ್ಯ–ವನ್ಯಜೀವಿ ಲೋಕಕ್ಕೆ ಬೆಸುಗೆ: ಸಾಹಿತಿ ಲಕ್ಷ್ಮೀಶ ತೋಳ್ಪಾಡಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2024, 22:25 IST
Last Updated 2 ಜನವರಿ 2024, 22:25 IST
<div class="paragraphs"><p>ಆರು ಕೃತಿಗಳನ್ನು ಸಾಹಿತಿ ಲಕ್ಷ್ಮೀಶ ತೋಳ್ಪಾಡಿ, ಕಾದಂಬರಿಕಾರ ಕುಂ.ವೀರಭದ್ರಪ್ಪ ಬಿಡುಗಡೆ ಮಾಡಿದರು. ‘ವೀರಲೋಕ‘ದ ಮುಖ್ಯಸ್ಥ ವೀರಕಪುತ್ರ ಶ್ರೀನಿವಾಸ, ಕೃತಿಕಾರರಾದ ಪ್ರೀತಿನಿ ಗೌಡ, ಡಾ.ಲೀಲಾ ಅಪ್ಪಾಜಿ, ಮಳವಳ್ಳಿ ಪ್ರಸನ್ನ, ಬೇಲೂರು ರಾಮಮೂರ್ತಿ, ಪತ್ರಕರ್ತ ಗೌರೀಶ್ ಅಕ್ಕಿ, ಕೃತಿಕಾರರಾದ ಶೋಭಾರಾವ್, ವಿವೇಕಾನಂದ ಕಾಮತ್ ಭಾಗವಹಿಸಿದ್ದರು</p></div>

ಆರು ಕೃತಿಗಳನ್ನು ಸಾಹಿತಿ ಲಕ್ಷ್ಮೀಶ ತೋಳ್ಪಾಡಿ, ಕಾದಂಬರಿಕಾರ ಕುಂ.ವೀರಭದ್ರಪ್ಪ ಬಿಡುಗಡೆ ಮಾಡಿದರು. ‘ವೀರಲೋಕ‘ದ ಮುಖ್ಯಸ್ಥ ವೀರಕಪುತ್ರ ಶ್ರೀನಿವಾಸ, ಕೃತಿಕಾರರಾದ ಪ್ರೀತಿನಿ ಗೌಡ, ಡಾ.ಲೀಲಾ ಅಪ್ಪಾಜಿ, ಮಳವಳ್ಳಿ ಪ್ರಸನ್ನ, ಬೇಲೂರು ರಾಮಮೂರ್ತಿ, ಪತ್ರಕರ್ತ ಗೌರೀಶ್ ಅಕ್ಕಿ, ಕೃತಿಕಾರರಾದ ಶೋಭಾರಾವ್, ವಿವೇಕಾನಂದ ಕಾಮತ್ ಭಾಗವಹಿಸಿದ್ದರು

   

ಬೆಂಗಳೂರು: ಕನ್ನಡ ಸಾಹಿತ್ಯ ಲೋಕಕ್ಕೂ ಪ್ರಾಣಿ, ಪಕ್ಷಿಗಳ ಲೋಕಕ್ಕೂ ಬಹಳ ಹಿಂದಿನಿಂದಲೂ ಬೆಸುಗೆ ಇದೆ ಎಂದು ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ತಿಳಿಸಿದರು.

ನಗರದಲ್ಲಿ ವೀರಲೋಕ ಪ್ರಕಾಶನ ಸಂಸ್ಥೆಯ ‘ಪುಸ್ತಕ ರಾತ್ರಿ’ ಕಾರ್ಯಕ್ರಮದಲ್ಲಿ ಆರು ಕೃತಿಗಳ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ADVERTISEMENT

ಕಾದಂಬರಿಕಾರ ಕುಂ.ವೀರಭದ್ರಪ್ಪ ಮಾತನಾಡಿ, ‘ಕನ್ನಡಕ್ಕೆ ಎರಡೂವರೆ ಸಾವಿರ ವರ್ಷಗಳ ಇತಿಹಾಸ ಇದೆ. ಕನ್ನಡ ಭಾಷೆ ಮತ್ತು ಅದರ ಬಲ ಎಂದಿಗೂ ಕುಂಠಿತವಾಗುವುದಿಲ್ಲ. ಆ ಬಗೆಯ ಯಾವುದೇ ಆತಂಕಗಳಿಲ್ಲ’ ಎಂದು ಹೇಳಿದರು.

ಪತ್ರಕರ್ತ ಗೌರೀಶ್ ಅಕ್ಕಿ, ಕೃತಿಕಾರರಾದ ಶೋಭರಾವ್, ಮಳವಳ್ಳಿ ಪ್ರಸನ್ನ, ವಿವೇಕಾನಂದ ಕಾಮತ್, ಬೇಲೂರು ರಾಮಮೂರ್ತಿ, ಡಾ.ಲೀಲಾ ಅಪ್ಪಾಜಿ ಮತ್ತು ಪ್ರೀತಿನಿ ಗೌಡ, ವೀರಲೋಕದ ಮುಖ್ಯಸ್ಥ ವೀರಕಪುತ್ರ ಶ್ರೀನಿವಾಸ ಭಾಗವಹಿಸಿದ್ದರು.

ಅರುಂಧತಿ ವಸಿಷ್ಠ ಹಾಗೂ ಎಚ್.ಸಿ. ಭಾರ್ಗವ್ ಅವರಿಂದ ಗೀತಗಾಯನ, ರಾಘವೇಂದ್ರ ಆಚಾರ್ ಅವರಿಂದ ಹಾಸ್ಯ ರಾತ್ರಿ ಕಾರ್ಯಕ್ರಮಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.