ಬೆಂಗಳೂರು: ರಾಜರಾಜೇಶ್ವರಿ ನಗರದ ದಿನೇಶ್ ಗುರೂಜಿ ಅವರು ಲೋಕ ಕಣ್ಯಾಣಾರ್ಥ ಹೊಸಕೆರೆಹಳ್ಳಿಯಲ್ಲಿರುವ ಭೈರಪ್ಪ ಬಡಾವಣೆಯ ಶ್ರೀ ವಿಜಯಶ್ರೀ ಯಾಗಶಾಲೆಯಲ್ಲಿ ಶತಚಂಡಿಕಾ ಮಹಾಯಾಗ ಹಮ್ಮಿಕೊಂಡಿದ್ದಾರೆ.
ಈ ಯಾಗ ಇದೇ 21ರಿಂದ ಪ್ರಾರಂಭವಾಗಿದ್ದು, 28ರವರೆಗೆ ನಡೆಯಲಿದೆ. ಪ್ರತಿ ದಿನ ಬೆಳಿಗ್ಗೆ 7 ಗಂಟೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಮಧ್ಯಾಹ್ನ 1 ಗಂಟೆಗೆ ತೀರ್ಥ ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 5 ಗಂಟೆಯಿಂದ ಜಪ, ಮಹಾಪೂಜೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಂಕಲ್ಪ, ಅನ್ನದಾನ, ಕಲಶ ಸೇರಿ ವಿವಿಧ ಸೇವೆಗಳಿಗೆ ಅವಕಾಶ ನೀಡಲಾಗಿದೆ.
ದಿನೇಶ್ ಗುರೂಜಿ ಅವರು ಪಟ್ಟಣಗೆರೆಯ ‘ಶ್ರೀಸನ್ನಿಧಾನ–ಆತ್ಮೀಯರ ಅರಮನೆ’ ವಿಜಯಾದುರ್ಗಾ ಪರಮೇಶ್ವರಿ ಅಮ್ಮನವರ ಆರಾಧಕರಾಗಿದ್ದಾರೆ. ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಭಾಗವಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.