ADVERTISEMENT

Lok Sabha Election | ಮೊದಲ ಬಾರಿಗೆ ಮತದಾನ ಮಾಡಿದವರ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2024, 15:11 IST
Last Updated 26 ಏಪ್ರಿಲ್ 2024, 15:11 IST
ಭೂಮಿಕಾ
ಭೂಮಿಕಾ   
ಮೊದಲ ಬಾರಿಗೆ ಮತದಾನ ಮಾಡುತ್ತಿರುವುದು ಖುಷಿ ತಂದಿದೆ. ದೇಶದ ಆಡಳಿತ ಉತ್ತಮ ಹಾಗೂ ಬಲಿಷ್ಠವಾಗಿರಬೇಕು. ಅದಕ್ಕಾಗಿ ಮತಚಲಾಯಿಸಿದ್ದೇನೆ.
ಭೂಮಿಕಾ, ಕೊನೇನ ಅಗ್ರಹಾರ
ಶೃತಿ ಪೈ
ಲೋಕಸಭಾ ಸದಸ್ಯರ ಆಯ್ಕೆಯಲ್ಲಿ ನನ್ನದೊಂದು ಮತ ದಾಖಲಾಗಿದೆ. ಮತಗಟ್ಟೆಯೊಳಗೆ ಇದೇ ಮೊದಲ ಬಾರಿಗೆ ಹೋಗಿದ್ದೆ. ಮತದಾನ ಹೊಸ ಅನುಭವ ನೀಡಿತು. ಪ್ರತಿ ಬಾರಿಯೂ ತಪ್ಪದೇ ಮತದಾನ ಮಾಡುತ್ತೇನೆ.
ಶ್ರುತಿ ಪೈ, ಕೊನೇನ ಅಗ್ರಹಾರ
ಅರ್ಪಿತಾ
ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಮತದಾರರ ಚೀಟಿಗೆ ಅರ್ಜಿ ಸಲ್ಲಿಸಿದ್ದೆ, ಆದರೆ, ಮತದಾರರ ಚೀಟಿ ಬಂದಿರಲಿಲ್ಲ. ಈ ಬಾರಿ ಮತದಾನದ ಚೀಟಿ ಬಂದಿದ್ದು, ತುಂಬಾ ಖುಷಿಯಿಂದ ಮತ ಚಲಾಯಿಸಿದ್ದೇನೆ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವವರಿಗೆ ನನ್ನ ಮೊದಲ ಮತ ನೀಡಿದ್ದೇನೆ.
ಅರ್ಪಿತಾ, ಶೇಷಾದ್ರಿಪುರ
ರೋಹಿಣಿ
ಮತದಾನದ ಪ್ರಕ್ರಿಯೆ ತುಂಬಾ ಸರಳವಾಗಿತ್ತು. ಯಾವುದೇ ಗೊಂದಲವಿಲ್ಲದೇ ಮತ ಚಲಾವಣೆ ಮಾಡಿದ್ದೇನೆ. ನಮ್ಮ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಮಾಡುವ ಅಭ್ಯರ್ಥಿಗೆ ನನ್ನ ಮೊದಲ ಮತ ನೀಡಿದ್ದೇನೆ.
ರೋಹಿಣಿ, ಮಲ್ಲೇಶ್ವರ
ನೇಹಾ ಮಲ್ಲೇಶ್ವರ
ಮೊದಲ ಬಾರಿಗೆ ಮತ ಚಲಾವಣೆ ಮಾಡಿರುವುದು ಒಳ್ಳೆಯ ಅನುಭವ ನೀಡಿದೆ. ಮತದಾನದ ಪ್ರಕ್ರಿಯೆ ಹೇಗಿರುತ್ತದೆ ಎಂಬ ಕುತೂಹಲವಿತ್ತು. ಪ್ರಜಾಪ್ರಭುತ್ವದ ಈ ಹಬ್ಬದಲ್ಲಿ ಮೊದಲ ಸಲ ಪಾಲ್ಗೊಂಡಿರುವುದಕ್ಕೆ ಬಹಳ ಹೆಮ್ಮೆ ಅನಿಸುತ್ತಿದೆ.
ನೇಹಾ, ಮಲ್ಲೇಶ್ವರ
ಅಭಯ್ ಕೆ ವಿಶ್ವೇಶ್ವರಪುರ
‌ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ಮತ ಚಲಾಯಿಸಬೇಕು. ನಮ್ಮ ದೇಶದ ಭವಿಷ್ಯವನ್ನು ರೂಪಿಸುವಲ್ಲಿ ನಮ್ಮ ಪಾತ್ರ ಬಹಳ ಮುಖ್ಯವಾಗಿದೆ.
ಅಭಯ್ ಕೆ, ವಿಶ್ವೇಶ್ವರಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.