ಏರೋ ಇಂಡಿಯಾ–2025: ಬೆಂಗಳೂರಿಗೆ ಬಂದಿಳಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ನವದೆಹಲಿ: ಅತ್ಯಾಧುನಿಕ ರಕ್ಷಣಾ ತಂತ್ರಜ್ಞಾನ ಹಾಗೂ ಜಾಗತಿಕ ವಾಯುಯಾನ ಕ್ಷೇತ್ರದ ಸರ್ವಶ್ರೇಷ್ಠತೆಗೆ ಈ ಸಾರಿಯ ಬೆಂಗಳೂರು ‘ಏರೋ ಇಂಡಿಯಾ–2025’ ‘ಏರ್ ಶೋ’ ಸಾಕ್ಷಿಯಾಗಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಾಳೆಯಿಂದ ಐದು ದಿನ ಆಯೋಜನೆಯಾಗಿರುವ 15ನೇ ಬೆಂಗಳೂರು ಏರ್ ಶೋ ನಲ್ಲಿ ಭಾಗವಹಿಸಲು ಅವರು ನವದೆಹಲಿಯಿಂದ ಇಂದು ಪ್ರಯಾಣ ಬೆಳೆಸಿದರು. ಇದಕ್ಕೂ ಮುನ್ನ ಅವರು ಎಕ್ಸ್‌ನಲ್ಲಿ ಈ ರೀತಿ ಪೋಸ್ಟ್ ಮಾಡಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ಎಎಎಲ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಸಚಿವರು, ಎಚ್‌ಎಎಲ್ ಘಟಕಕ್ಕೆ ಭೇಟಿ ನೀಡಿದರು. ಮುಂದಿನ ಐದು ದಿನ ಅವರು ಬೆಂಗಳೂರಿನಲ್ಲಿದ್ದು ಏರ್ ಶೋದ ಮೇಲ್ವಿಚಾರಣೆ ವಹಿಸಲಿದ್ದಾರೆ.
ಯಲಹಂಕದ ವಾಯುನೆಲೆಯಲ್ಲಿ ಫೆಬ್ರುವರಿ 10 ರಿಂದ ಫೆಬ್ರುವರಿ 14ರವರೆಗೆ ‘ಏರೋ ಇಂಡಿಯಾ–2025’ ವೈಮಾನಿಕ ಪ್ರದರ್ಶನ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.