ADVERTISEMENT

ಲಾರಿ ಡಿಕ್ಕಿ ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2019, 19:10 IST
Last Updated 8 ಫೆಬ್ರುವರಿ 2019, 19:10 IST
ಕೋಮಲಾ
ಕೋಮಲಾ   

ಹೆಸರಘಟ್ಟ: ಇಲ್ಲಿನ ಬಸ್‌ ನಿಲ್ದಾಣದ ಮುಂದೆ ರಸ್ತೆ ಬದಿ ನಿಂತಿದ್ದ ಮಹಿಳೆಯ ಮೇಲೆ ಲಾರಿ ಹರಿದು ಅವರು ಮೃತ ಪಟ್ಟಿದ್ದಾರೆ.

ಕೋಮಲಾ ಕೆ.(41) ಮೃತ ಮಹಿಳೆ. ಪೀಣ್ಯದಲ್ಲಿರುವ ಸಾಯಿ ಎಕ್ಸ್‌ಪೋರ್ಟ್‌ ಗಾರ್ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಕೋಮಲಾ ಬೆಳಿಗ್ಗೆ ಫ್ಯಾಕ್ಟರಿಗೆ ಹೋಗಲು ಬಸ್ಸು ನಿಲ್ದಾಣಕ್ಕೆ ಬಂದಿದ್ದರು.

ನೀರಿನ ಲಾರಿ ನಿಯಂತ್ರಣ ತಪ್ಪಿ ಕೋಮಲಾ ಅವರ ಮೇಲೆ ಹರಿದಿದೆ.

ADVERTISEMENT

ತಕ್ಷಣ ಸಾರ್ವಜನಿಕರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲೇ ಆ ಮಹಿಳೆ ಮೃತಪಟ್ಟಿದ್ದಾರೆ ಎಂದು ಜಾಲಹಳ್ಳಿ ಸಂಚಾರ ಪೊಲೀಸರು ತಿಳಿಸಿದ್ದಾರೆ.

ಕೋಮಲಾ ಅವರಿಗೆ ಇಬ್ಬರು ‍ಪುತ್ರಿಯರು ಮತ್ತು ಒಬ್ಬ ಪುತ್ರ ಇದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.