ADVERTISEMENT

ನಾಳೆ ‘ಮಹಾಕುಂಭಾಭಿಷೇಕ’

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2021, 3:51 IST
Last Updated 2 ಮಾರ್ಚ್ 2021, 3:51 IST

ಬೆಂಗಳೂರು: ಶ್ರೀರಾಮ ಸೇವಾ ಮಂಡಳಿಯು ರಾಜಾಜಿನಗರದ ಶ್ರೀರಾಮ ಮಂದಿರ ದೇವಸ್ಥಾನದ ರಾಜಗೋಪುರ ಹಾಗೂ ಗರ್ಭಗುಡಿ ಗೋಪುರಗಳ ಮಹಾಕುಂಭಾಭಿಷೇಕವನ್ನು ಮಾ.3ರಂದು ಬೆಳಿಗ್ಗೆ 10.30ಕ್ಕೆ ಹಮ್ಮಿಕೊಂಡಿದೆ.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಡಳಿಯಸ್ವಾಗತ ಸಮಿತಿಯ ವ್ಯವಸ್ಥಾಪಕ ಕೆ.ಎಸ್.ಶ್ರೀಧರ್,‘ಮೂರು ಗರ್ಭಗುಡಿಗಳ ಮುಂಭಾಗಕ್ಕೆ ಹಾಗೂ ಕಂಬಗಳಿಗೆ ತಾಮ್ರ ಲೇಪನ ಮತ್ತು ರಾಜಗೋಪುರ, ಗರ್ಭಗುಡಿ ಗೋಪುರಗಳಿಗೆ ಬಣ್ಣದ ಲೇಪನ ಮಾಡಲಾಗಿದೆ. ಮಾ.2ರಂದು ಬೆಳಿಗ್ಗೆ 9 ಗಂಟೆಗೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ದೀಪ ಬೆಳಗಿಸುವ ಮೂಲಕಕುಂಭಾಭಿಷೇಕಕ್ಕೆ ಚಾಲನೆ ನೀಡಲಿದ್ದಾರೆ’ ಎಂದರು.

ಸಮಿತಿಯ ಅಧ್ಯಕ್ಷ ಎಚ್.ಎಸ್.ಸೋಮಶೇಖರ್,‘ಕುಂಭಾಭಿಷೇಕದ ಅಂಗವಾಗಿ ಶ್ರೀರಾಮನ ವೇಷಭೂಷಣ ಸ್ಪರ್ಧೆಯೂ ಇರಲಿದೆ. ಕಾರ್ಯಕ್ರಮಕ್ಕೆ ಹೆಚ್ಚು ಜನರು ಸೇರುವ ನಿರೀಕ್ಷೆ ಇರುವುದರಿಂದ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.