ADVERTISEMENT

ಕಾನೂನು ಸಲಹೆ ಮೇರೆಗೆ ಕ್ರಮ: ಮಹೇಶ ಜೋಶಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 21:53 IST
Last Updated 18 ಫೆಬ್ರುವರಿ 2026, 21:53 IST
<div class="paragraphs"><p>ಮಹೇಶ ಜೋಶಿ</p></div>

ಮಹೇಶ ಜೋಶಿ

   

ಬೆಂಗಳೂರು: ‘ದೂರದರ್ಶನದಲ್ಲಿ ಉಪ ಮಹಾನಿರ್ದೇಶಕನಾಗಿ ಕಾರ್ಯ ನಿರ್ವಹಿಸುತ್ತಿರುವಾಗ, ‘ಮಾಹಿತಿ ಹಕ್ಕು ಕಾಯ್ದೆ ಅಡಿ ಮಾಹಿತಿ ನೀಡಲಿಲ್ಲ’ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಸ್ತವ ಅರಿಯಲು ನ್ಯಾಯಾಲಯದ ಆದೇಶಕ್ಕೆ ಕಾಯಬೇಕು’ ಎಂದು ಮಹೇಶ ಜೋಶಿ ಹೇಳಿದ್ದಾರೆ. ‌

‘ಈ ಪ್ರಕರಣವು 2010ರಲ್ಲಿ ನಡೆದಿತ್ತು. ಕಾನೂನು ಸಲಹೆ ಮೇರೆಗೆ ಹಾಗೂ ನವದೆಹಲಿಯ ದೂರದರ್ಶನ ಮಹಾ ನಿರ್ದೇಶನಾಲಯದ ಸೂಚನೆ ಅನುಸಾರ ಕ್ರಮಗಳನ್ನು ಕೈಗೊಂಡಿದ್ದೇನೆ. ವಾಸ್ತವಿಕ ಮಾಹಿತಿ ಅರಿಯಬೇಕು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.