ADVERTISEMENT

ಮಣ್ಣಿನ ಫಲವತ್ತತೆ ಉಳಿಸುವುದು ಮುಖ್ಯವಾಗಬೇಕು: ಜಗ್ಗಿ ವಾಸುದೇವ್

​ಪ್ರಜಾವಾಣಿ ವಾರ್ತೆ
Published 6 ಮೇ 2023, 20:14 IST
Last Updated 6 ಮೇ 2023, 20:14 IST
ಜಗ್ಗಿ ವಾಸುದೇವ್
ಜಗ್ಗಿ ವಾಸುದೇವ್   

ಬೆಂಗಳೂರು: ‘ನಾಡಿನ ಮಣ್ಣನ್ನು ಫಲವತ್ತಾಗಿಸಲು ಪ್ರತ್ಯೇಕ ಯೋಜನೆಗಳನ್ನು ರೂಪಿಸಬೇಕು’ ಎಂದು ಈಶ ಫೌಂಡೇಷನ್‌ನ ಸದ್ಗುರು ಜಗ್ಗಿ ವಾಸುದೇವ್ ಅವರು ಎಲ್ಲಾ ಅಭ್ಯರ್ಥಿಗಳಲ್ಲಿ ಮನವಿ ಮಾಡಿದ್ದಾರೆ.

‘ಕರ್ನಾಟಕಕ್ಕಾಗಿ ನಿಮ್ಮ ಬೇರೆ ಯಾವುದೇ ಯೋಜನೆಗಳಿದ್ದರೂ ಮಣ್ಣು ಉಳಿಸುವುದು ಮೂಲ ಧ್ಯೇಯವಾಗಬೇಕು. ಇದು ಕರ್ನಾಟk ರೈತರ ಏಕೈಕ ಬೇಡಿಕೆ. ಕನ್ನಡನಾಡಿನ ಮಣ್ಣನ್ನು ಫಲವತ್ತಾಗಿಸಬೇಕು. ರೈತರು ಮತ್ತು ರಾಜ್ಯದ ಸಮೃದ್ಧಿಗೆ ಇರುವುದು ಇದೊಂದೇ ಮಾರ್ಗ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT