ADVERTISEMENT

ಮಲಬಾರ್‌ನಿಂದ 21 ಹೊಸ ಶೋ ರೂಂ ಶೀಘ್ರ: ಅಹ್ಮದ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2019, 20:04 IST
Last Updated 27 ಆಗಸ್ಟ್ 2019, 20:04 IST

ಬೆಂಗಳೂರು: ಮಲಬಾರ್‌ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌ ‌‌ಸಂಸ್ಥೆಯು 6 ತಿಂಗಳಲ್ಲಿ 21 ಹೊಸ ಶೋ ರೂಂ ಆರಂಭಿಸಲಿದೆ ಎಂದು ಕಂಪನಿ ಪ್ರಕಟಣೆ ತಿಳಿಸಿದೆ.

ಮಲಬಾರ್ ಸಮೂಹದ ಅಧ್ಯಕ್ಷ ಎಂ.ಪಿ.ಅಹ್ಮದ್, ‘ಜಾಗತಿಕ ಮತ್ತು ಭಾರತೀಯ ಮಾರುಕಟ್ಟೆಯಲ್ಲಿ ನಮ್ಮ ಬ್ರ್ಯಾಂಡ್‌ ಅನ್ನು ಗ್ರಾಹಕರು ಒಪ್ಪಿಕೊಂಡಿದ್ದಾರೆ. ಈ ವರ್ಷದಲ್ಲಿ ಇನ್ನೂ ಹೆಚ್ಚಿನ ಶೋರೂಂಗಳನ್ನು ತೆರೆಯುವುದರೊಂದಿಗೆ, ಆಭರಣ ತಯಾರಿಕಾ ಘಟಕಗಳನ್ನು ಆರಂಭಿಸಲಿದ್ದೇವೆ. ಅಲ್ಲದೆ, ಯುವಪೀಳಿಗೆಗೆ ಉದ್ಯೋಗ ಲಭಿಸುವಂತಹ ಆಭರಣ ತಯಾರಿಕೆಯ ಕೌಶಲ ಅಭಿವೃದ್ಧಿ ಕೇಂದ್ರಗಳನ್ನೂ ಆರಂಭಿಸಲಿದ್ದೇವೆ’ ಎಂದು ತಿಳಿಸಿದ್ದಾರೆ.

‘ಹೊಸ ವಿಸ್ತರಣೆಯಿಂದಾಗಿ ಮಲಬಾರ್ ಗ್ರೂಪ್‍ನ ವೃತ್ತಿಪರ ಸಿಬ್ಬಂದಿ ಸಂಖ್ಯೆ 13,500ಕ್ಕೆ ಏರಲಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.