ADVERTISEMENT

ಮಾಲ್ಟಾ ದೇಶದಲ್ಲಿ ಉದ್ಯೋಗ ಆಮಿಷ: ₹ 1.85 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2022, 16:03 IST
Last Updated 28 ಫೆಬ್ರುವರಿ 2022, 16:03 IST
   

ಬೆಂಗಳೂರು: ಮಾಲ್ಟಾ ದೇಶದಲ್ಲಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ನಗರದ ಶುಶ್ರೂಷಕಿಯೊಬ್ಬರಿಂದ ₹ 1.85 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಕೆಂಪಾಪುರದ ನಿವಾಸಿಯಾಗಿರುವ 39 ವರ್ಷದ ಮಹಿಳೆಯೊಬ್ಬರು ವಂಚನೆ ಬಗ್ಗೆ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ನಗರದ ಆಸ್ಪತ್ರೆಯೊಂದರಲ್ಲಿ ಶುಶ್ರೂಷಕಿ ಆಗಿರುವ ಮಹಿಳೆ, ಮಾಲ್ಟಾದಲ್ಲಿ ಉದ್ಯೋಗ ಮಾಡಲು ಇಚ್ಛಿಸಿದ್ದರು. ಅದಕ್ಕಾಗಿ ಆನ್‌ಲೈನ್‌ನಲ್ಲಿ ಹುಡುಕಾಡಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಜಾಹೀರಾತು ನೋಡಿದ್ದ ಮಹಿಳೆ, ಅದರಲ್ಲಿರುವ ಮೊಬೈಲ್‌ಗೆ ನಂಬರ್‌ಗೆ ಕರೆ ಮಾಡಿದ್ದರು.’

ADVERTISEMENT

‘ಸೆಂಥಿಲ್ ವಿನೋದ್ ಹೆಸರಿನಲ್ಲಿ ಪರಿಚಯಿಸಿಕೊಂಡಿದ್ದ ಆರೋಪಿ, ‘ಮಾಲ್ಟಾದಲ್ಲಿ ಉದ್ಯೋಗ ಖಾಲಿ ಇದೆ. ಕೆಲ ಶುಲ್ಕ ಪಾವತಿ ಮಾಡಿದರೆ, ಉದ್ಯೋಗ ಕೊಡಿಸುತ್ತೇನೆ’ ಎಂದಿದ್ದರು. ಆತನ ಮಾತು ನಂಬಿದ್ದ ಮಹಿಳೆ, ಹಂತ ಹಂತವಾಗಿ ₹ 1.85 ಲಕ್ಷ ತುಂಬಿದ್ದರು. ಅದಾದ ನಂತರ ಆರೋಪಿ ನಾಪತ್ತೆಯಾಗಿದ್ದಾನೆ’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.