ಬೆಂಗಳೂರು: ಎಐ–ಚಾಲಿತ ಡಿಜಿಟಲ್ ಆರೋಗ್ಯ ಆರೈಕೆ ಸೇವೆಯನ್ನು ಒದಗಿಸುವ ಉದ್ದೇಶದಿಂದ ಮಣಿಪಾಲ್ ಹಾಸ್ಪಿಟಲ್ಸ್ ಸಂಸ್ಥೆಯು ಗೂಗಲ್ ಕ್ಲೌಡ್‌ನೊಂದಿಗೆ ಕೈಜೋಡಿಸಿದೆ.
ಈ ಪಾಲುದಾರಿಕೆಯಿಂದ ಆರೋಗ್ಯ ಸೇವೆಯಲ್ಲಿ ಹೊಸ ಯುಗ ಅರಂಭವಾಗಲಿದ್ದು, ಕೃತಕ ಬುದ್ಧಿಮತ್ತೆಯಿಂದ, ಅತ್ಯುನ್ನತ ದತ್ತಾಂಶ ವಿಶ್ಲೇಷಣೆ ಮತ್ತು ಕ್ಲೌಡ್‌ನ ಮೂಲಸೌಕರ್ಯವನ್ನು ಬಳಸಿಕೊಂಡು ರೋಗಿಯ ಆರೈಕೆಯ ಮೌಲ್ಯ ವೃದ್ಧಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಕ್ಲೌಡ್‌ನ ಮೂಲಸೌಕರ್ಯದೊಂದಿಗೆ ಎಐ ಚಾಲಿತ ತಂತ್ರಜ್ಞಾನದ ಮೂಲಕ ಮಣಿಪಾಲ್ ಆಸ್ಪತ್ರೆಗಳು ತಮ್ಮ ಇ-ಫಾರ್ಮಸಿ ವೇದಿಕೆಯನ್ನು ನಿರ್ವಹಿಸಲಿವೆ. ಈ ಮೂಲಕ ಇ–ಫಾರ್ಮಸಿ ಪ್ರಕ್ರಿಯೆ ಅವಧಿ 15 ನಿಮಿಷದಿಂದ 5 ನಿಮಿಷಕ್ಕೆ ಕಡಿತಗೊಳ್ಳಲಿದ್ದು, ನರ್ಸ್‌ಗಳ ಸಂಚಾರ ಅವಧಿಯನ್ನು 90 ನಿಮಿಷದಿಂದ 20 ನಿಮಿಷಕ್ಕೆ ಇಳಿಕೆಯಾಗಲಿದೆ ಎಂದು ತಿಳಿಸಲಾಗಿದೆ.
‘ನಮ್ಮ ಕಾರ್ಯಾಚರಣೆಗಳಿಗೆ ನಿರ್ಣಾಯಕವಾದ ಉನ್ನತ ಮಟ್ಟದ ಕಾರ್ಯಕ್ಷಮತೆ ಮತ್ತು ಸುರಕ್ಷತೆಯನ್ನು ಗೂಗಲ್ ಕ್ಲೌಡ್ ಒದಗಿಸಲಿದೆ. ಮೂಲಸೌಕರ್ಯ ನಿರ್ವಹಣೆಯ ಹೊರೆಯಿಲ್ಲದೆ, ನಮ್ಮ ತಂಡಗಳು ನಿರ್ಣಾಯಕ ಪ್ರಕರಣಗಳಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಸದೃಢರಾಗಲಿವೆ’ ಎಂದು ಮಣಿಪಾಲ್ ಹಾಸ್ಪಿಟಲ್ಸ್‌ನ ಗ್ರೂಪ್ ಮುಖ್ಯ ಕಾರ್ಯಾಚರಣಾ ಅಧಿಕಾರಿ ಕಾರ್ತಿಕ್ ರಾಜಗೋಪಾಲ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.