ಮಾನಸ ಸರೋವರ ಯಾತ್ರೆ (ಸಂಗ್ರಹ ಚಿತ್ರ)
ಬೆಂಗಳೂರು: ಕೈಲಾಸ ಪರ್ವತ, ಮಾನಸ ಸರೋವರ ಯಾತ್ರೆಯು ಪುನಾರಂಭ ಆಗಿದ್ದು, ಅಡಿಗಾಸ್ ಯಾತ್ರಾ ಕಂಪನಿಯು ಆಗಸ್ಟ್ 11, 21 ಹಾಗೂ 31ರಂದು ಈ ಯಾತ್ರೆಗೆ ಗುಂಪುಗಳನ್ನು ಕರೆದೊಯ್ಯಲಿದೆ. ಇದಕ್ಕೆ ಬುಕಿಂಗ್ ಶುರುವಾಗಿದೆ ಎಂದು ಕಂಪನಿ ತಿಳಿಸಿದೆ. 13 ವರ್ಷ ಮೇಲ್ಪಟ್ಟ, 70 ವರ್ಷಕ್ಕಿಂತ ಕಡಿಮೆ ವಯಸ್ಸಾದ, ಆರು ತಿಂಗಳ ವಾಯಿದೆಯ ಪಾಸ್‌ಪೋರ್ಟ್ ಹೊಂದಿರುವ ಭಾರತೀಯ ಪ್ರಜೆಗಳು ಈ ಯಾತ್ರೆಯಲ್ಲಿ ಭಾಗಿಯಾಗಬಹುದು.
70 ವರ್ಷಕ್ಕಿಂತ ಹೆಚ್ಚು ವಯಸ್ಸಾದವರಿಗೆ ವಿಮಾನದ ಮೂಲಕ ಕೈಲಾಸ ಪರ್ವತ ಹಾಗೂ ಮಾನಸ ಸರೋವರ ತೋರಿಸುವ ವ್ಯವಸ್ಥೆಯೂ ಇದೆ ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ 94494 78944, 70222 59008 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು. ಅಥವಾ www.adigasyatra.com ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.