ADVERTISEMENT

ಬೆಂಗಳೂರು: MS ಧೋನಿ ಗ್ಲೋಬಲ್​ ಸ್ಕೂಲ್ ಸೇರಿ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 7:36 IST
Last Updated 18 ಜುಲೈ 2025, 7:36 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ನಗರದ 40ಕ್ಕೂ ಅಧಿಕ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆಯ ಇ–ಮೇಲ್ ಬಂದಿದ್ದು, ಆತಂಕ ಸೃಷ್ಟಿಯಾಗಿತ್ತು.

ಎಂ.ಎಸ್​.ಧೋನಿ ಗ್ಲೋಬಲ್​ ಸ್ಕೂಲ್​ ಸೇರಿದಂತೆ ಆರ್.ಆರ್. ನಗರ ಹಾಗೂ ಕೆಂಗೇರಿ ಭಾಗದ ಶಾಲೆಗಳಿಗೆ ಬೆದರಿಕೆ ಕಳುಹಿಸಲಾಗಿದೆ.

ADVERTISEMENT

ಇ–ಮೇಲ್​ ಗಮನಿಸುತ್ತಿದ್ದಂತೆ ಶಾಲೆಗಳಲ್ಲಿ ಆತಂಕ ಎದುರಾಗಿದ್ದು, ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಕೂಡಲೇ ಎಚ್ಚೆತ್ತ ಪೊಲೀಸರು, ಮುಂಜಾಗ್ರತಾ ಕ್ರಮವಾಗಿ ಬಾಂಬ್​ ನಿಷ್ಕ್ರಿಯ ದಳದೊಂದಿಗೆ ತೆರಳಿ ತಪಾಸಣೆ ಕಾರ್ಯದಲ್ಲಿ ನಿರತರಾಗಿದ್ದಾರೆ.

'ಕಪ್ಪು ಬಣ್ಣದ ಪ್ಲಾಸ್ಟಿಕ್ ಬ್ಯಾಗ್‌ಗಳಲ್ಲಿ ಸ್ಫೋಟಕ ತುಂಬಿ ಶಾಲಾ ತರಗತಿಗಳಲ್ಲಿ ಇರಿಸಲಾಗಿದೆ. ನನಗೆ ನಿಜಕ್ಕೂ ನನ್ನ ಜೀವನವೇ ಇಷ್ಟವಿಲ್ಲ. ನಾನೂ ಸಹ ಅತ್ಮಹತ್ಯೆಗೆ ಶರಣಾಗುತ್ತೇನೆ. ದಯವಿಟ್ಟು ಇ–ಮೇಲ್ ಸಂದೇಶದ ಪ್ರತಿಯನ್ನು ಮಾಧ್ಯಮಗಳಿಗೆ ನೀಡಿ' ಎಂದು ರೋಡ್‌ಕಿಲ್ ಎಂಬ ಹೆಸರಿನೊಂದಿಗೆ ಇ–ಮೇಲ್ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.