ADVERTISEMENT

ಬೆಂಗಳೂರು: ‘ಮರ ಕಡಿಬೇಡಿ’ ಟ್ವಿಟರ್‌ನಲ್ಲಿ ಕೂಗು

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2020, 7:14 IST
Last Updated 2 ಸೆಪ್ಟೆಂಬರ್ 2020, 7:14 IST

ಬೆಂಗಳೂರು: ನಗರದ ಹೊರವಲಯಗಳಲ್ಲಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮವು (ಕೆಆರ್‌ಡಿಸಿಎಲ್‌) ಕೈಗೆತ್ತಿಕೊಂಡಿರುವ ರಸ್ತೆ ವಿಸ್ತರಣೆ ಕಾಮಗಾರಿಗಳಿಗೆ 10 ಸಾವಿರಕ್ಕೂ ಅಧಿಕ ಮರಗಳನ್ನು ಕಡಿಯುವುದನ್ನು ನಿಲ್ಲಿಸಬೇಕು ಎಂದು ಟ್ವಿಟ್ಟಿಗರು ಒತ್ತಾಯಿಸಿದ್ದಾರೆ.

ಈ ಕುರಿತು ಸಿಟಿಜನ್ಸ್‌ ಅಜೆಂಡಾ ಫಾರ್‌ ಬೆಂಗಳೂರು, ವಾಯ್ಸ್‌ ಆಫ್‌ ಸರ್ಜಾಪುರ ಮತ್ತಿತರ ಸಂಘಟನೆಗಳು ‘ಮರ ಕಡಿಬೇಡಿ’ ಹಾಗೂ ‘ಸೇವ್‌ ಹೆರಿಟೇಜ್‌ ಟ್ರೀಸ್‌’ ಹ್ಯಾಷ್‌ಟ್ಯಾಗ್‌ನಲ್ಲಿ ಟ್ವಿಟರ್‌ನಲ್ಲಿ ಮಂಗಳವಾರ ಅಭಿಯಾನ ಹಮ್ಮಿಕೊಂಡಿದ್ದವು.

ರಸ್ತೆ ವಿಸ್ತರಣೆಗಾಗಿ ಕಡಿಯಲಾಗುವ ಮರಗಳ ಚಿತ್ರಗಳನ್ನು ಹಂಚಿಕೊಂಡಿದ್ದ ಟ್ವಿಟ್ಟಿಗರು, ‘ಬೆಂಗಳೂರಿನಲ್ಲಿ ಶೇ 70ರಷ್ಟು ಹಸಿರು ಇತ್ತು. ಈಗ ಅದರ ಪ್ರಮಾಣ ಶೇ 3ಕ್ಕೆ ಇಳಿದಿದೆ. ತಲೆಬುಡವಿಲ್ಲದ ಅನ್ನಷ್ಟು ಯೋಜನೆಗಳಿಂದಾಗಿ ನಗರದ ಹಸಿರು ಇನ್ನಷ್ಟು ಅಪಾಯ ಎದುರಿಸುತ್ತಿದೆ. ಅಳಿದುಳಿದ ಮರಗಳನ್ನು ಉಳಿಸಿಕೊಳ್ಳದಿದ್ದರೆ, ನಗರದಲ್ಲಿ ಒಂದೇ ಒಂದು ಮರವೂ ಇರುವುದಿಲ್ಲ’ ಎಂದು ಟ್ವೀಟ್‌ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.