ADVERTISEMENT

ಮಸೂದ್‌ನನ್ನು ಉಗ್ರ ಪಟ್ಟಿಗೆ ಸೇರಿಸುವ ಪ್ರಸ್ತಾವ ಶೀಘ್ರ ಇತ್ಯರ್ಥ–ಚೀನಾ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2019, 11:27 IST
Last Updated 17 ಏಪ್ರಿಲ್ 2019, 11:27 IST
   

ಬೀಜಿಂಗ್‌: ಜೈಷೆ–ಎ– ಮೊಹಮ್ಮದ್‌ ಉಗ್ರ ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸುವ ಪ್ರಕರಣವನ್ನುಶೀಘ್ರವೇ ಇತ್ಯರ್ಥಪಡಿಸಲಾಗುವುದು ಎಂದು ಚೀನಾ ಬುಧವಾರ ಹೇಳಿದೆ.

ತಾಂತ್ರಿಕ ಕಾರಣಗಳ ನೆಪ ಹೇಳಿ ಚೀನಾಉಗ್ರ ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸುವ ಪ್ರಕ್ರಿಯೆಗೆ ತಡೆ ನೀಡಿರುವುದನ್ನು ಇತ್ಯರ್ಥಪಡಿಸದಿದ್ದರೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮತ ನಿರ್ಣಯ ಮಾಡಬೇಕಾಗುತ್ತದೆ ಎಂದುಅಮೆರಿಕ, ಫ್ರಾನ್ಸ್‌ ಮತ್ತು ಇಂಗ್ಲೆಂಡ್‌ ದೇಶಗಳು ನೀಡಿರುವ ಹೇಳಿಕೆಯನ್ನು ಚೀನಾ ತಳ್ಳಿ ಹಾಕಿದೆ.

ಮಸೂದ್‌ ಅಜರ್ ವಿಷಯಕ್ಕೆ ಸಂಬಂಧಿಸಿದಂತೆ ಚೀನಾದ ನಿಲುವಿನಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ. ಇದನ್ನು ಇತ್ಯರ್ಥ ಪಡಿಸಲುನಾವು ನಮ್ಮ ಸಮಾನ ಮನಸ್ಕ ದೇಶಗಳ ಜತೆ ಚರ್ಚೆ ಮಾಡುತ್ತಿದ್ದು ಈ ಪ್ರಕರಣವನ್ನು ಬೇಗ ಪರಿಹರಿಸಲಾಗುವುದು ಎಂದು ಚೀನಾದ ವಿದೇಶಾಂಗ ವಕ್ತಾರರಾದ ಲೂ ಕಾಂಗ್‌ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.