
ಮದುವೆ (ಪ್ರಾತಿನಿಧಿಕ ಚಿತ್ರ)
(ಐಸ್ಟೋಕ್ ಚಿತ್ರ)
ಬೆಂಗಳೂರು: ಶ್ರೀ ಬನಶಂಕರಿ ಸಾಮೂಹಿಕ ವಿವಾಹ ವೇದಿಕೆಯಿಂದ 2026ರ ಫೆಬ್ರುವರಿ 26ರಂದು ಬನಶಂಕರಿ ದೇವಿ ದೇವಸ್ಥಾನದ ಆವರಣದಲ್ಲಿ 27ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಆಯೋಜಿಸಲಾಗಿದೆ.
ವೇದಿಕೆ ವ್ಯವಸ್ಥಾಪಕರಾದ ಎ.ಎಚ್. ಬಸವರಾಜು, ಜೆ.ಆರ್. ದಾಮೋದರ್ ನಾಯ್ಡು, ‘26 ವರ್ಷಗಳಿಂದ 1,591 ಉಚಿತ ಸಾಮೂಹಿಕ ವಿವಾಹಗಳನ್ನು ನೆರವೇರಿಸಲಾಗಿದೆ. ಜಾತಿ, ಮತ, ಬೇಧವಿಲ್ಲದೇ ಎಲ್ಲ ಸಮುದಾಯದವರಿಗೆ ಒಂದೇ ಮದುವೆ ಮಂಟಪದಲ್ಲಿ ವಿವಾಹ ಮಹೋತ್ಸವ ಹಮ್ಮಿಕೊಳ್ಳಲಾಗುತ್ತಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಧು ವರರಿಗೆ ಹಿಂದೂ ಸಂಪ್ರದಾಯದಂತೆ ಸಮವಸ್ತ್ರ, ಬಾಸಿಂಗ, ಕಂಕಣದಾರ, ಹೂವಿನ ಹಾರ, ಮಾಂಗಲ್ಯ, ಕಾಲುಂಗುರ, ಪೇಟ ನೀಡಲಾಗುತ್ತದೆ. ಇದರ ಜೊತೆಗೆ ಊಟದ ವ್ಯವಸ್ಥೆ ಇರಲಿದೆ. 2026ರ ಫೆ. 15ರೊಳಗೆ ನೋಂದಣಿ ಮಾಡಿಕೊಳ್ಳಬೇಕು ಎಂದರು.
ಮಾಹಿತಿಗೆ: 98450 61887.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.