ADVERTISEMENT

ಸುರಂಗ ಕೊರೆದು ಹೊರಬಂದ ‘ವಾಮಿಕ’

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2022, 20:41 IST
Last Updated 12 ಡಿಸೆಂಬರ್ 2022, 20:41 IST
ಸುರಂಗ ಕೊರೆದು ಹೊರಬಂದ ‘ವಾಮಿಕ’ ಟಿಬಿಎಂ ಯಂತ್ರ
ಸುರಂಗ ಕೊರೆದು ಹೊರಬಂದ ‘ವಾಮಿಕ’ ಟಿಬಿಎಂ ಯಂತ್ರ   

ಬೆಂಗಳೂರು: ಗೊಟ್ಟಿಗೆರೆ–ನಾಗವಾರ ಮೆಟ್ರೊ ರೈಲು ಮಾರ್ಗದಲ್ಲಿ ಮತ್ತೊಂದು ಸುರಂಗ ಕೊರೆಯುವ ಕಾಮಗಾರಿಯನ್ನು ಬೆಂಗಳೂರು ಮೆಟ್ರೊ ರೈಲು ನಿಗಮ(ಬಿಎಂಆರ್‌ಸಿಎಲ್) ಪೂರ್ಣಗೊಳಿಸಿದೆ.

ಸುರಂಗ ಕೊರೆಯುವ ಯಂತ್ರ(ವಾಮಿಕ) ಡೇರಿ ವೃತ್ತದ ನಿಲ್ದಾಣದಿಂದ ಲಕ್ಕಸಂದ್ರ ನಿಲ್ದಾಣದವರೆಗೆ 742.60 ಮೀಟರ್‌ ಸುರಂಗವನ್ನು ಯಶಸ್ವಿಯಾಗಿ ಕೊರೆದು ಸೋಮವಾರ ಹೊರ ಬಂದಿದೆ. 2022ರ ಏಪ್ರಿಲ್ 24ರಂದು ಡೇರಿ ವೃತ್ತದ ನಿಲ್ದಾಣದಿಂದ ಕಾಮಗಾರಿ ಆರಂಭಿಸಿತ್ತು.

ಈ ಮೊದಲು ‘ವಾಮಿಕ’ ಟಿಬಿಎಂ, ದಕ್ಷಿಣ ರ್‍ಯಾಂಪ್‌ನಿಂದ ಡೇರಿ ವೃತ್ತದ ತನಕ 613.20 ಮೀಟರ್‌ ಸುರಂಗ ಕೊರೆದಿತ್ತು. ಈಗ ಲಕ್ಕಸಂದ್ರ ಮತ್ತು ಲ್ಯಾಂಗ್‌ಫೋರ್ಡ್‌ ಟೌನ್ ನಿಲ್ದಾಣಗಳ ನಡುವೆ ಸುರಂಗ ಕೊರೆಯುವ ಕಾಮಗಾರಿಗೆ ಈ ಯಂತ್ರವನ್ನು ನಿಯೋಜಿಸಲಾಗುವುದು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಗೊ‌ಟ್ಟಿಗೆರೆ–ನಾಗವಾರ ಮಾರ್ಗದಲ್ಲಿ ಡೇರಿ ವೃತ್ತದಿಂದ ನಾಗವಾರ ತನಕ ಸುರಂಗ ಮಾರ್ಗ ನಿರ್ಮಾಣವಾಗುತ್ತಿದೆ. ಸುರಂಗ ಕೊರೆಯುವ ಕಾಮಗಾರಿ ಅಂತಿಮ ಹಂತದಲ್ಲಿದೆ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.