
ಪ್ರಜಾವಾಣಿ ಸಂಗ್ರಹ ಚಿತ್ರ
ಬೆಂಗಳೂರು: ಮಹದೇವಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕೆಟಿಪಿಒ ರಸ್ತೆ ಮತ್ತು ಇಪಿಐಪಿ ರಸ್ತೆಗಳಲ್ಲಿ ರೋಟರಿ ಕ್ಲಬ್ ಆಫ್ ಬೆಂಗಳೂರು ಹಾಗೂ ಐ.ಟಿ ಕಾರಿಡಾರ್ ವತಿಯಿಂದ 18ನೇ ವರ್ಷದ ‘ಮಿಡ್‌ನೈಟ್ ಮ್ಯಾರಥಾನ್’ ಆಯೋಜಿಸಲಾಗಿದ್ದು, ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.
ಡಿ.6ರ ಮಧ್ಯಾಹ್ನ 3ರಿಂದ ಡಿ.7ರ ಬೆಳಿಗ್ಗೆ 5ರವರೆಗೆ ಸಂಚಾರ ಮಾರ್ಗ ಬದಲಾವಣೆ ಜಾರಿಯಲ್ಲಿ ಇರುತ್ತದೆ.
ನಿರ್ಬಂಧಿತ ರಸ್ತೆಗಳು: ಕುಂದಲಹಳ್ಳಿ ಮುಖ್ಯರಸ್ತೆಯ ಕುಂದಲಹಳ್ಳಿ ಮೆಟ್ರೊ ನಿಲ್ದಾಣದ ಬಳಿಯಿರುವ ಜಿಂಜರ್ ಹೋಟೆಲ್ ಜಂಕ್ಷನ್‌ನಿಂದ ಐಟಿಪಿಎಲ್ ಬ್ಯಾಕ್ ಗೇಟ್‌ವರೆಗೆ (ಎಡಭಾಗದ ರಸ್ತೆ).
ಪರ್ಯಾಯ ಮಾರ್ಗ: ಗ್ರಾಫೈಟ್ ಇಂಡಿಯಾ ಜಂಕ್ಷನ್‌ನಿಂದ ವೈದೇಹಿ, ಐ.ಟಿ.ಪಿ.ಎಲ್ ಕಡೆಗೆ ಸಂಚರಿಸುವ ವಾಹನ ಸವಾರರು, ಚಾಲಕರು ಕುಂದಲಹಳ್ಳಿ ಮೆಟ್ರೊ ನಿಲ್ದಾಣದ ಬಳಿಯಿರುವ ಜಿಂಜರ್ ಹೋಟೆಲ್ ಬಳಿ ಬಲಕ್ಕೆ ತಿರುವು ಪಡೆದು ಆ್ಯಕ್ಸಿಸ್ ಬ್ಯಾಂಕ್ ಬಳಿಯ ಯು ಟರ್ನ್ ಜಂಕ್ಷನ್‌ನಲ್ಲಿ ಕಡ್ಡಾಯವಾಗಿ ಎಡಕ್ಕೆ ತಿರುವು ಪಡೆದುಕೊಳ್ಳಬೇಕು. ಬಿಗ್ ಬಜಾರ್ ಜಂಕ್ಷನ್‌ನಲ್ಲಿ ಎಡಕ್ಕೆ ತಿರುವು ಪಡೆದು ಹೂಡಿ ಕಡೆಗೆ ತೆರಳಲು ನೇರವಾಗಿ ಸಂಚರಿಸಬಹುದಾಗಿದೆ. ಬಿಗ್ ಬಜಾರ್ ಜಂಕ್ಷನ್‌ನಲ್ಲಿಯೇ ಬಲಕ್ಕೆ ತಿರುವು ಪಡೆದು ಹೋಪ್ ಫಾರಂ ಕಡೆಗೆ ಸಂಚರಿಸಬಹುದು.
ಕುಂದಲಹಳ್ಳಿ ಕಡೆಯಿಂದ ವೈದೇಹಿ ಕಡೆಗೆ ಸಂಚರಿಸುವ ಬಿಎಂಟಿಸಿ ಬಸ್‌ಗಳು ಮತ್ತು ಭಾರಿ ಸರಕು ಸಾಗಣೆ ವಾಹನಗಳು ಗ್ರಾಫೈಟ್ ಇಂಡಿಯಾ ಜಂಕ್ಷನ್‌ನಲ್ಲಿ ನೇರವಾಗಿ ಸಂಚರಿಸಿ ಸುಮಧುರ ನಂದನ ಅಪಾರ್ಟ್‌ಮೆಂಟ್ ಬಳಿ ಎಡಕ್ಕೆ ತಿರುವು ಪಡೆದು ನೇರವಾಗಿ ಸಂಚರಿಸಿ ನೆಟ್ ಆಫ್ ಜಂಕ್ಷನ್ ಬಳಿ ಬಲಕ್ಕೆ ತಿರುವು ಪಡೆದುಕೊಳ್ಳಬೇಕು. ಐಟಿಪಿಎಲ್ ಮತ್ತು ಹೋಮ್‌ಫಾರಂ ಕಡೆಗೆ ಸಂಚರಿಸಬಹುದು ಎಂದು ಸಂಚಾರ ಪೂರ್ವ ವಿಭಾಗದ ಡಿಸಿಪಿ ಸಾಹಿಲ್ ಬಾಗ್ಲಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.