ADVERTISEMENT

ಊರಿಗೆ ಮರಳಿದ 4 ಸಾವಿರ ವಲಸೆ ಕಾರ್ಮಿಕರು

​ಪ್ರಜಾವಾಣಿ ವಾರ್ತೆ
Published 24 ಮೇ 2020, 19:12 IST
Last Updated 24 ಮೇ 2020, 19:12 IST
ಬಿಹಾರದ ವಲಸೆ ಕಾರ್ಮಿಕರು ವಿಶೇಷ ರೈಲಿನ ಉಪಯೋಗ ಪಡೆಯಲು ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಭಾನುವಾರ ಧಾವಿಸಿ ಬಂದರು. (ಪ್ರಜಾವಾಣಿ ಚಿತ್ರ: ಅನೂಪ್ ರಾಘ ಟಿ.)
ಬಿಹಾರದ ವಲಸೆ ಕಾರ್ಮಿಕರು ವಿಶೇಷ ರೈಲಿನ ಉಪಯೋಗ ಪಡೆಯಲು ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಭಾನುವಾರ ಧಾವಿಸಿ ಬಂದರು. (ಪ್ರಜಾವಾಣಿ ಚಿತ್ರ: ಅನೂಪ್ ರಾಘ ಟಿ.)   

ಬೆಂಗಳೂರು: ಅರಮನೆ ಮೈದಾನದಲ್ಲೇ ಉಳಿದಿದ್ದ ವಲಸೆ ಕಾರ್ಮಿಕರಲ್ಲಿ 4 ಸಾವಿರ ಮಂದಿ ಭಾನುವಾರ ತಮ್ಮ ಊರುಗಳತ್ತ ಪ್ರಯಾಣ ಬೆಳೆಸಿದರು.

ಅರಮನೆ ರಸ್ತೆಯಲ್ಲಿ ಶನಿವಾರ ಜಮಾಯಿಸಿದ್ದ ಕಾರ್ಮಿಕರು ಊರಿಗೆ ಕಳುಹಿಸಿಕೊಡಿ ಎಂದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಬಳಿ ಅಂಗಲಾಚಿದ್ದರು. ನಗರದ ವಿವಿಧೆಡೆಯಿಂದ ಬಂದು ಒಂದೆಡೆ ಸೇರಿದ್ದರಿಂದ ನಿಯಂತ್ರಿಸಲು ಅಧಿಕಾರಿಗಳು ಪರದಾಡಿದ್ದರು.

ಅವರೆಲ್ಲರಿಗೂ ಅರಮನೆ ಮೈದಾನದಲ್ಲೇ ಉಳಿಯಲು ಬಿಬಿಎಂಪಿ ಅಧಿಕಾರಿಗಳು ವ್ಯವಸ್ಥೆ ಮಾಡಿದ್ದರು. ಅವರಿಗೆ ಇಂದಿರಾ ಕ್ಯಾಂಟೀನ್ ಮೂಲಕ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡಲಾಗಿತ್ತು. ಭಾನುವಾರ ಬೆಳಿಗ್ಗೆ ವಿಶೇಷ ರೈಲುಗಳಲ್ಲಿ ಅವರನ್ನು ಕಳುಹಿಸಿಕೊಡಲಾಯಿತು. ಇನ್ನೂ 2 ಸಾವಿರ ಕಾರ್ಮಿಕರನ್ನು ಕಳುಹಿಸಲು ಬಾಕಿ ಇದೆ. ಎಲ್ಲರಿಗೂ ಅಗತ್ಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.