ADVERTISEMENT

ನೆಲಮಂಗಲ | ಸಚಿವ ಕೃಷ್ಣಬೈರೇಗೌಡ ದಿಢೀರ್‌ ಭೇಟಿ: ತಹಶೀಲ್ದಾರ್‌ಗೆ ತರಾಟೆ

​ಪ್ರಜಾವಾಣಿ ವಾರ್ತೆ
Published 8 ಮೇ 2025, 15:51 IST
Last Updated 8 ಮೇ 2025, 15:51 IST
<div class="paragraphs"><p>ಕೃಷ್ಣಬೈರೇಗೌಡ ಅವರು ಕಡತಗಳನ್ನು ಪರಿಶೀಲಿಸಿ ತಹಶೀಲ್ದಾರ್ ಅಮೃತ್ ಅತ್ರೇಶ್ ಅವರನ್ನು ತರಾಟೆಗೆ ತೆಗೆದುಕೊಂಡರು</p></div>

ಕೃಷ್ಣಬೈರೇಗೌಡ ಅವರು ಕಡತಗಳನ್ನು ಪರಿಶೀಲಿಸಿ ತಹಶೀಲ್ದಾರ್ ಅಮೃತ್ ಅತ್ರೇಶ್ ಅವರನ್ನು ತರಾಟೆಗೆ ತೆಗೆದುಕೊಂಡರು

   

ನೆಲಮಂಗಲ: ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ತಾಲ್ಲೂಕು ಕಚೇರಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ರೈತರ ಕಡತಗಳನ್ನು ವಿಲೇವಾರಿ ಮಾಡುವುದರಲ್ಲಿ ವಿಳಂಬ, ಕಡತಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ, ಸಿಬ್ಬಂದಿ ಸರಿಯಾದ ಸಮಯಕ್ಕೆ ಹಾಜರಾಗುತ್ತಿಲ್ಲ ಎಂದು ದೂರುಗಳು ಬರುತ್ತಿವೆ ಏನು ಕ್ರಮ ಕೈಗೊಂಡಿದ್ದೀರಿ’ ಎಂದು ತಹಶೀಲ್ದಾರ್‌ ಅಮೃತ್‌ ಅತ್ರೇಶ್‌ ಅವರನ್ನು ಪ್ರಶ್ನಿಸಿದರು.

ADVERTISEMENT

‘ತಾಲ್ಲೂಕು ಕಚೇರಿಯ ಶೌಚಾಲಯ ಸಂಪೂರ್ಣ ಹಾಳಾಗಿದ್ದು ಗಬ್ಬೆದ್ದು ನಾರುತ್ತಿದೆ. ಶೌಚಾಲಯದ ಸಮಸ್ಯೆ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ಏಕೆ ತಂದಿಲ್ಲ, ಸರಿಪಡಿಸಬೇಡಿ ಎಂದು ನಿಮ್ಮನ್ನು ಯಾರಾದರು ತಡೆದಿದ್ದಾರೆಯೆ, ತಾಲ್ಲೂಕು ಕಚೇರಿ ಎಂದರೆ ಸರ್ಕಾರದ ಪ್ರತಿನಿಧಿ. ಇದನ್ನು ಗ್ಯಾರೇಜ್‌, ಕಸದ ತೊಟ್ಟಿಯ ರೀತಿ ನಿರ್ವಹಣೆ ಮಾಡುತ್ತಿದ್ದೀರಿ’ ಎಂದು ತರಾಟೆಗೆ ತೆಗೆದುಕೊಂಡರು.

‘ಹಳೆಯದಾದ ಮುರುಕಲು ಟಿಜೋರಿಗಳನ್ನು ಏಕೆ ಇಟ್ಟುಕೊಂಡಿದ್ದೀರಿ. ಇದರಲ್ಲೆಲ್ಲ ಏನು ತುಂಬಿದ್ದೀರಿ, ಅಗತ್ಯವಿರುವ ದಾಖಲೆಗಳನ್ನು ಮಾತ್ರ ಸಂಗ್ರಹಿಸಿ. ಕ್ರಮಬದ್ಧವಾಗಿ ವರ್ಗೀಕರಣ ಮಾಡಿ ಜೋಡಿಸಿ. ದಾಖಲೆಗಳು ಹಾಳಾಗದಂತೆ ಸ್ಕ್ಯಾನಿಂಗ್‌ ಶೀಘ್ರವಾಗಿ ಪೂರ್ಣಗೊಳಿಸಿ ಎಂದು ಸೂಚಿಸಿದರು. ಸರ್ವೆ ದಾಖಲೆಗಳನ್ನು ಅನುಕೂಲಕ್ಕೆ ತಕ್ಕಂತೆ ತಿದ್ದುವ ಉದ್ದೇಶದಿಂದ ಡಿಜಿಟಲೀಕರಣ ಕಾರ್ಯ ವಿಳಂಬ ಮಾಡುತ್ತಿದ್ದೀರಾ’ ಎಂದು ಅವರು ಸರ್ವೆ ಅಧಿಕಾರಿಗಳನ್ನು ಪ್ರಶ್ನಿಸಿದರು.

ಕಚೇರಿಯನ್ನು ಆಧುನೀಕರಣಗೊಳಿಸಲು ಶಾಸಕ ಶ್ರೀನಿವಾಸ್‌ ಅವರ ಬಳಿ ಮಾತನಾಡಿ, ಅಂದಾಜು ಪಟ್ಟಿ ಕಳುಹಿಸಿ ಎಂದು ತಹಶೀಲ್ದಾರ್‌ಗೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.