
ಬೆಂಗಳೂರು: ‘ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯವರಿಗೆ ಮೀಸಲಿಟ್ಟಿರುವ ಅನುದಾನ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಕಾನೂನು, ಯೋಜನೆ ರೂಪಿಸಿದರೂ ಉಪಯೋಗ ಆಗುತ್ತಿಲ್ಲ’ ಎಂದು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಅಂಬೇಡ್ಕರ್ ಭವನದಲ್ಲಿ ಬುಧವಾರ ನಡೆದ ಸಂವಿಧಾನ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಪ್ರತಿ ವರ್ಷ ₹43 ಸಾವಿರ ಕೋಟಿಯನ್ನು ಈ ಸಮುದಾಯದವರ ಅಭಿವೃದ್ದಿಗೆ ಮೀಸಲಿಡಲಾಗುತ್ತಿದೆ. ಅಲ್ಲದೇ ಗುತ್ತಿಗೆದಾರರಿಗೆ ಅವಕಾಶ ಆಗಲಿ ಎಂದು ನಿಯಮಗಳಲ್ಲಿ ಬದಲಾವಣೆ ಮಾಡಿದರೂ ಉಪಯೋಗವೇ ಆಗುತ್ತಿಲ್ಲ. ಅರ್ಹತೆ ಕಾರಣ ನೀಡಿ ಗುತ್ತಿಗೆ ನಿರಾಕರಿಸಲಾಗುತ್ತಿದೆ. ನೇರ ಪ್ರಯೋಜನ ಸಿಗದೇ ಅಭಿವೃದ್ದಿಯೂ ಆಗುತ್ತಿಲ್ಲ. ಏಕ ಗವಾಕ್ಷಿ ಯೋಜನೆ ರೂಪಿಸಿ ಸೌಲಭ್ಯ ಸಿಗುವಂತೆ ಮಾಡಿ’ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಸರ್ಕಾರ ಎಂದರೆ ನಾನೊಬ್ಬನೇ ಅಲ್ಲ, ಮಂತ್ರಿಮಂಡಲದ ನಿರ್ಧಾರವೂ ಮುಖ್ಯವಾಗುತ್ತದೆ. ಯಾವುದೇ ಕಾರ್ಯಕ್ರಮ ರೂಪಿಸಿದರೆ ಜಾರಿಗೊಳಿಸುವ ಹೊಣೆ ಸಚಿವರು, ಶಾಸಕರು ಹಾಗೂ ಅಧಿಕಾರಿಗಳದ್ದಾಗಿರುತ್ತದೆ. ಇದಕ್ಕೆ ಬೇಕಾದ ಬದಲಾವಣೆ ಮಾಡಿ ಅನುದಾನ ಸಮುದಾಯದ ಏಳಿಗೆಗೆ ಬಳಸಿ. ದುರುಪಯೋಗ ತಪ್ಪಿಸಿ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.