ADVERTISEMENT

‘Mithun Number Two and Other Mumbai Stories’ ಪುಸ್ತಕ ಬಿಡುಗಡೆ ಇಂದು ಸಂಜೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಫೆಬ್ರುವರಿ 2024, 5:09 IST
Last Updated 14 ಫೆಬ್ರುವರಿ 2024, 5:09 IST
   

ಬೆಂಗಳೂರು: ಖ್ಯಾತ ಲೇಖಕ ಜಯಂತ್ ಕಾಯ್ಕಿಣಿ ರಚಿಸಿರುವ, ತೇಜಸ್ವಿನಿ ನಿರಂಜನ ಅವರು ಭಾಷಾಂತರಿಸಿರುವ ‘MITHUN NUMBER TWO AND OTHER MUMBAI STORIES'(ಮಿಥುನ್ ನಂಬರ್ ಟು ಹಾಗೂ ಮುಂಬಯಿಯ ಇತರ ಕಥೆಗಳು) ಪುಸ್ತಕ ಬಿಡುಗಡೆ ಕಾರ್ಯಕ್ರಮ ಇಂದು ನಡೆಯಲಿದೆ.

ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ಸಂಜೆ 6.30 ರಿಂದ 8 ಗಂಟೆವರೆಗೆ ಕಾರ್ಯಕ್ರಮ ನಿಗದಿಯಾಗಿದೆ.

‘How to Tell a Mumbai Story’ ಕಾರ್ಯಕ್ರಮದಲ್ಲಿ ಗಣ್ಯ ಅತಿಥಿಗಳು ಮುಂಬೈ ಅನುಭವಗಳ ಬಗ್ಗೆ ಮೆಲುಕು ಹಾಕಲಿದ್ದಾರೆ.

ADVERTISEMENT

ಭಾಗವಹಿಸುವವರು

ಜಯಂತ್ ಕಾಯ್ಕಿಣಿ

–ಕವಿ, ಲೇಖಕ

ಇಂದಿರಾ ಚಂದ್ರಶೇಖರ್

–ಲೇಖಕಿ, ಸಂಪಾದಕಿ, ಔಟ್ ಆಫ್ ಪ್ರಿಂಟ್

ತೇಜಸ್ವಿನಿ ನಿರಂಜನ

-ಅನುವಾದಕಿ, ಸ್ಕಾಲರ್ ಅಂಡ್ ಡೈರೆಕ್ಟರ್ ಸೆಂಟರ್ ಫಾರ್ ಇಂಟರ್‌–ಏಷ್ಯನ್ ರಿಸರ್ಚ್, ಅಹಮದಾಬಾದ್

ವನಮಾಲ ವಿಶ್ವನಾಥ

-ಅನುವಾದಕಿ

ಪ್ರಶಸ್ತಿ ಪುರಸ್ಕೃತ ಲೇಖಕ ಮತ್ತು ಭಾಷಾಂತರಕಾರರ ತಂಡದಿಂದ ರಚನೆಯಾದ ಪುಸ್ತಕ ‘ಮಿಥುನ್ ನಂಬರ್ ಟು ಹಾಗೂ ಮುಂಬಯಿಯ ಇತರ ಕಥೆಗಳು’. ಇದೇ ತಂಡ 2018ರಲ್ಲಿ ‘ನೋ ಪ್ರೆಸೆಂಟ್ಸ್ ಪ್ಲೀಸ್’ ಎಂಬ ಪುಸ್ತಕಕ್ಕೆ ಡಿಎಸ್​ಸಿ ಪ್ರಶಸ್ತಿ ಪಡೆದಿತ್ತು. ಮಿಥುನ್ ನಂಬರ್ ಟು ಸಣ್ಣ ಕಥೆಗಳ ಸಂಗ್ರಹವಾಗಿದ್ದು, ಈ ಕಥೆಗಳು ವರ್ಣಾತೀತ ಅನುಭವಗಳ ಕ್ಷಣಗಳನ್ನು ಕಣ್ಣಿಗೆ ಕಟ್ಟಿಕೊಡುತ್ತವೆ. ಇದರಲ್ಲಿ ಬರುವ ಕಿರಿಯ ಮತ್ತು ಹಿರಿಯ ವಯಸ್ಸಿನ ಎರಡೂ ಪಾತ್ರಗಳು ಬೇರೆ ಬೇರೆ ಕಾರಣಗಳಿಗೆ ಮುಂಬೈಗೆ ಹೋಗಿ ನೆಲಸುತ್ತಾರೆ. ಈ ಮಹಾನಗರಿಯಲ್ಲಿ ಅಪರಿಚಿತರು ಸ್ನೇಹಿತರಾಗುತ್ತಾರೆ, ಕುಟುಂಬಗಳು ಪ್ರೀತಿ ಮತ್ತು ಮನಸ್ತಾಪಗಳ ಮಧ್ಯೆ ಹೊಯ್ದಾಡುತ್ತವೆ. ಮಕ್ಕಳು ಕಾಳಜಿ ಮತ್ತು ಕಟ್ಟಳೆಗಳ ನಡುವಿನ ಸಣ್ಣ ಗೆರೆಯ ಮಧ್ಯೆ ಬೆಳೆಯುತ್ತಾ ಹೋಗುತ್ತವೆ. ಕನ್ನಡದ ಮನೋಜ್ಞ ಕಥೆಗಾರ ಜಯಂತ್ ಕಾಯ್ಕಿಣಿ ಅವರ ಕಥೆಗಳನ್ನು ತೇಜಸ್ವಿನಿ ನಿರಂಜನ ಅವರು ತರ್ಜುಮೆ ಮಾಡಿದ್ದಾರೆ. ಈ ಕಥೆಗಳು ಬಹಳ ಸರಳ ಮತ್ತು ಅನಿರೀಕ್ಷಿತ ಅನುಭವಗಳನ್ನು ನೀಡುತ್ತವೆ.

ಈ ಸಂಜೆ ಜಯಂತ್ ಕಾಯ್ಕಿಣಿ, ತೇಜಸ್ವಿನಿ ನಿರಂಜನ ಅವರ ಜೊತೆ ಇನ್ನಿಬ್ಬರು ಮೇರು ಸಾಹಿತಿಗಳಾದ ವನಮಾಲ ವಿಶ್ವನಾಥ್ ಮತ್ತು ಇಂದ್ರ ಚಂದ್ರಶೇಖರ್ ಸಂವಾದ ನಡೆಸಲಿದ್ದಾರೆ. ಮಿಥುನ್ ನಂಬರ್ ಟುದ ಕಥೆಗಳ ರಸಾನುಭವ ಕಟ್ಟಿಕೊಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.