
ಪ್ರಜಾವಾಣಿ ವಾರ್ತೆ
ಸಾಂದರ್ಭಿಕ ಚಿತ್ರ
ರಾಜರಾಜೇಶ್ವರಿ ನಗರ: ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಹೆಸರಿನಲ್ಲಿ ಎಸ್.ಟಿ.ಎಸ್ ಕಪ್ 2026 ಕ್ರಿಕೆಟ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ.
ಯಶವಂತಪುರ ಕ್ಷೇತ್ರದ ಮತದಾರರಿಗೆ ಮಾತ್ರ ಅವಕಾಶವನ್ನು ಕಲ್ಪಿಸಲಾಗಿದ್ದು, ಮಾ.5ರ ಒಳಗಾಗಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು.
ಪ್ರಥಮ ಬಹುಮಾನ ₹3 ಲಕ್ಷ ನಗದು ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ ₹2.50 ಲಕ್ಷ, ತೃತೀಯ ಬಹುಮಾನ ₹2 ಲಕ್ಷ, ನಾಲ್ಕನೇ ಬಹುಮಾನ ₹1.50 ಲಕ್ಷ, ಐದನೇ ಬಹುಮಾನ ₹1 ಲಕ್ಷ ಸಿಗಲಿದೆ. ಉಳಿದ ತಂಡಗಳಿಗೆ ತಲಾ ₹12,000 ಸಮಾಧಾನಕರ ಬಹುಮಾನ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9742381982, 9986773424 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.