ADVERTISEMENT

ಮೊಬೈಲ್ ಕಳವು: ‘ಚಿಕನ್ ಕಬಾಬ್’ ವ್ಯಾಪಾರಿ ಬಂಧನ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2022, 19:44 IST
Last Updated 24 ನವೆಂಬರ್ 2022, 19:44 IST

ಬೆಂಗಳೂರು: ನಗರದ ಹಲವೆಡೆ ಮೊಬೈಲ್ ಕಳ್ಳತನ ಮಾಡಿದ್ದ ಆರೋಪದಡಿ ಮೊಹಮ್ಮದ್ ಇಮ್ರಾನ್ ಅಲಿಯಾಸ್ ಗೂಡೂಸ್ (35) ಎಂಬುವರನ್ನು ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಚಾಮರಾಜಪೇಟೆ ಟಿಪ್ಪುನಗರ ನಿವಾಸಿ ಇಮ್ರಾನ್, ಮೈಸೂರು ರಸ್ತೆಯಲ್ಲಿ ಚಿಕನ್ ಕಬಾಬ್ ಮಳಿಗೆ ಇಟ್ಟುಕೊಂಡಿದ್ದ. ಇದರ ಜೊತೆಯಲ್ಲೇ ಮೊಬೈಲ್ ಕಳ್ಳತನ ಮಾಡುತ್ತಿದ್ದ. ಕೆಲ ಪುರಾವೆಗಳನ್ನು ಆಧರಿಸಿ ಇಮ್ರಾನ್‌ನನ್ನು ಬಂಧಿಸಲಾಗಿದ್ದು, ₹ 1.10 ಲಕ್ಷ ಮೌಲ್ಯದ 18 ಮೊಬೈಲ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ವ್ಯಾಪಾರ ಸ್ಥಳ, ಮಾರುಕಟ್ಟೆ ಹಾಗೂ ವಿವಿಧೆಡೆ ಸಂಚರಿಸುತ್ತಿದ್ದ ಆರೋಪಿ ಜನರ ಗಮನ ಬೇರೆಡೆ ಸೆಳೆದು ಮೊಬೈಲ್ ಕದಿಯುತ್ತಿದ್ದ. ಇತ್ತೀಚೆಗಷ್ಟೇ ಕದ್ದ ಮೊಬೈಲ್‌ಗಳನ್ನು ಮನೆಯಲ್ಲಿಟ್ಟುಕೊಂಡಿದ್ದ. ಅವುಗಳನ್ನು ಮಾರಲು ಯತ್ನಿಸುತ್ತಿದ್ದ. ಮನೆ ಮೇಲೆ ದಾಳಿ ಮಾಡಿ ಮೊಬೈಲ್ ಜಪ್ತಿ ಮಾಡಲಾಗಿದೆ. ಆರೋಪಿ, ಹಲವು ವರ್ಷಗಳಿಂದ ಕೃತ್ಯ ಎಸಗುತ್ತಿದ್ದ ಮಾಹಿತಿ ಇದೆ’ ಎಂದು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.