ADVERTISEMENT

47 ಮೊಬೈಲ್‌ ವಶ: ಬಂಧನ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 21:48 IST
Last Updated 12 ನವೆಂಬರ್ 2019, 21:48 IST

ಬೆಂಗಳೂರು: ₹ 2 ಲಕ್ಷ ಮೌಲ್ಯದ 47 ಮೊಬೈಲ್‌ಗಳ ಸಹಿತ ಮೂವರನ್ನು ವಿವೇಕನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ದೇವರಜೀವನಹಳ್ಳಿ ನಿವಾಸಿ ಆರೀಫ್‌ ಪಾಶಾ (42), ಹಳೇಗುಡದಹಳ್ಳಿಯ ತೌಸಿಫ್‌ (25) ಮತ್ತು ಪಾದರಾಯ
ನಪುರದ ಪರ್ವೀಜ್‌ ಪಾಶಾ (24) ಬಂಧಿತರು.

‘ಆಸ್ಟಿನ್‌ ಟೌನ್‌ನ ಬಿಡಿಎ ಕಾಂಪ್ಲೆಕ್ಸ್‌ ಬಳಿ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ಈ ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೆ ನಡೆಸಿದಾಗ ಅವರ ಬಳಿ ಇದ್ದ ಬ್ಯಾಗ್‌ನಲ್ಲಿ ಬಿಲ್‌ಗಳಿಲ್ಲದ ಮೊಬೈಲ್‌ಗಳು ಸಿಕ್ಕಿವೆ. ಈ ಎಲ್ಲ ಈ ಮೊಬೈಲ್‌ಗಳನ್ನು ಕಳವು ಮಾಡಿರುವ ಶಂಕೆ ಇದೆ. ಬಂಧಿತರ ವಿಚಾರಣೆ ನಡೆಯುತ್ತಿದೆ’ ಎಂದು ಪೊಲೀಸರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.