ADVERTISEMENT

‘ಕೋತಿಗಳ ಸ್ಥಳಾಂತರ ವ್ಯರ್ಥ ಪ್ರಯತ್ನ’

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2019, 20:12 IST
Last Updated 28 ಸೆಪ್ಟೆಂಬರ್ 2019, 20:12 IST
‘ಲಿವಿಂಗ್ ವಿಥ್ ದಿ ವೈಲ್ಡ್‌’ ಪುಸ್ತಕವನ್ನು ಮನೇಕಾ ಗಾಂಧಿ ಬಿಡುಗಡೆ ಮಾಡಿದರು. ಜೆ. ಭೂಪೇಶ ರೆಡ್ಡಿ ಇದ್ದರು –ಪ್ರಜಾವಾಣಿ ಚಿತ್ರ
‘ಲಿವಿಂಗ್ ವಿಥ್ ದಿ ವೈಲ್ಡ್‌’ ಪುಸ್ತಕವನ್ನು ಮನೇಕಾ ಗಾಂಧಿ ಬಿಡುಗಡೆ ಮಾಡಿದರು. ಜೆ. ಭೂಪೇಶ ರೆಡ್ಡಿ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ನಗರದಲ್ಲಿ ಮಂಗಗಳನ್ನು ಹಿಡಿದು ಸ್ಥಳಾಂತರ ಮಾಡಲು ನೀಡಿರುವ ಅನುಮತಿಯನ್ನು ಅರಣ್ಯ ಇಲಾಖೆ ಹಿಂಪಡೆಯಬೇಕು’ ಎಂದು ಸಂಸದೆ ಮೇನಕಾ ಗಾಂಧಿ ಒತ್ತಾಯಿಸಿದರು.

ಪಿಎಫ್‌ಎ ವೈಲ್ಡ್‌ಲೈಫ್‌ ಆಸ್ಪತ್ರೆಯು ಬೆಂಗಳೂರು ಇಂಟರ್‌ನ್ಯಾಷನಲ್‌ ಸೆಂಟರ್‌ನಲ್ಲಿ ಶನಿವಾರ ಆಯೋಜಿಸಿದ್ದ ‘ಲಿವಿಂಗ್‌ ವಿತ್‌ ವೈಲ್ಡ್‌’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಾಡು ಪ್ರಾಣಿಗಳನ್ನು ನಗರದಿಂದ ಹೊರದೂಡಿದರೆ, ಹೂವು ಮತ್ತು ಪರಿಶುದ್ಧ ಗಾಳಿಯನ್ನು ಹೊರದೂಡಿದಂತೆ. ಕೋತಿಗಳನ್ನು ಹಿಡಿದು ಸ್ಥಳಾಂತರ ಮಾಡಲು ಕೋಟಿಗಟ್ಟಲೆ ಖರ್ಚು ಮಾಡಲಾಗಿದೆ. ಆದರೆ, ನೀವು ಎಷ್ಟೇ ದೂರ ಕೊಂಡೊಯ್ದು ಬಿಟ್ಟರೂ ಅವು ಮತ್ತೆ ಹಿಂದಿರುಗುತ್ತಿವೆ. ಹೀಗಾಗಿ ಅವುಗಳನ್ನು ಸ್ಥಳಾಂತರ ಮಾಡುವ ವ್ಯರ್ಥ ಪ್ರಯತ್ನಕ್ಕೆ ಕೈ ಹಾಕಬಾರದು’ ಎಂದರು.

ADVERTISEMENT

‘ಬೆಂಗಳೂರಿನಲ್ಲಿ ಮಂಗಗಳು, ಜಿಂಕೆಗಳು, ವಿವಿಧ ಜಾತಿಯ ಪಕ್ಷಿಗಳು, ಹಲ್ಲಿಗಳಿವೆ. ಇಲಿಗಳಿಗೂ ಆಶ್ರಯ ನೀಡಿರುವ ಬೆಂಗಳೂರಿನ ಜನರಿಗೆ ಧನ್ಯವಾದಗಳು’ ಎಂದರು.

ಪರಿಸರ ವಾದಿ ಲಿಯೊ ಸಲ್ಡಾನ ಮಾತನಾಡಿ, ‘ಪಶ್ಚಿಮ ಬಂಗಾಳದಲ್ಲಿ ಆನೆಗಳು ರೈಲಿಗೆ ಸಿಲುಕಿ ಸಾಯುತ್ತಿವೆ. ಮನುಷ್ಯ ಮಾಡಿಕೊಂಡಿರುವ ನಿಯಮಗಳನ್ನು ಪ್ರಾಣಿಗಳು ಪಾಲಿಸಬೇಕೆ? ಈ ರೀತಿಯ ಸೂಕ್ಷ್ಮತೆಗಳನ್ನು
ಅರಣ್ಯ ಇಲಾಖೆ ಗಮನಿಸಬೇಕು’ ಎಂದರು.

‌ಚರ್ಚೆಯಲ್ಲಿ ಭಾಗವಹಿಸಿದ್ದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್, ‘ಅರಣ್ಯ ಇಲಾಖೆಯು ವನ್ಯಜೀವಿಗಳ ವಿಷಯದಲ್ಲಿ ಸೂಕ್ಷ್ಮತೆಗಳನ್ನು ಗಮನಿಸಿಕೊಂಡೇ ಕೆಲಸ ಮಾಡುತ್ತಿದೆ’ ಎಂದು ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.