ADVERTISEMENT

ಭಾರತೀಯ ಪರಂಪರೆ ಉಳಿದಿರುವುದಕ್ಕೆ ನಮ್ಮ ಸಂಸ್ಕಾರಗಳೇ ಕಾರಣ: ಸಂಸದ ಡಾ.ಕೆ.ಸುಧಾಕರ್

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 21:06 IST
Last Updated 22 ಫೆಬ್ರುವರಿ 2026, 21:06 IST
<div class="paragraphs"><p>ಡಾ.ಕೆ.ಸುಧಾಕರ್</p></div>

ಡಾ.ಕೆ.ಸುಧಾಕರ್

   

ಬೆಂಗಳೂರು: ‘ಭಾರತೀಯ ಪರಂಪರೆ, ನಾಗರಿಕತೆಯು ಜೀವಂತವಾಗಿ ಉಳಿದಿರುವುದಕ್ಕೆ ನಮ್ಮ ಭಕ್ತಿ ಪರಂಪರೆ, ಸಂಸ್ಕೃತಿ ಹಾಗೂ ಸಂಸ್ಕಾರಗಳೇ ಕಾರಣ’ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು.

ಯಲಹಂಕ ಕ್ಷೇತ್ರದ ಚೊಕ್ಕನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ದಕ್ಷಿಣ ಕಾಳಿಕಾದೇವಿಯ ನೂತನ ದೇವಸ್ಥಾನ, ಶಿಲಾವಿಗ್ರಹ ಪ್ರತಿಷ್ಠಾಪನೆ, ಕಳಶ ಸ್ಥಾಪನೆ‌ ಹಾಗೂ ಮಹಾ ಕುಂಭಾಭಿಷೇಕ ಮಹೋತ್ಸವದಲ್ಲಿ ಅವರು ಮಾತನಾಡಿದರು. ‘ನಮ್ಮ ಸನಾತನ ಧರ್ಮಕ್ಕೂ, ಭಾರತೀಯ ಸಂಸ್ಕೃತಿಗೂ ಅವಿನಾಭಾವ ಸಂಬಂಧವಿದೆ. ಇವು ಒಂದೇ ನಾಣ್ಯದ ಎರಡು ಮುಖಗಳು. ಎಲ್ಲಿ ಶಕ್ತಿ ದೇವತೆಗಳನ್ನು ಆರಾಧಿಸುತ್ತಾರೋ ಅಲ್ಲಿ ಮಹಿಳೆಯರಿಗೆ ವಿಶೇಷವಾದ ಶಕ್ತಿ, ಆರೋಗ್ಯ ದೊರೆಯುತ್ತದೆ. ನಮ್ಮ ಧಾರ್ಮಿಕ ಪರಂಪರೆಯನ್ನು ಶ್ರದ್ಧೆಯಿಂದ ಪಾಲಿಸಿಕೊಂಡು ಮುಂದೆ ಸಾಗಬೇಕು’ ಎಂದರು. 

ADVERTISEMENT

ಕಾರ್ಯಕ್ರಮದ ಸಾನಿಧ್ಯವನ್ನು ಕೊರಟಗೆರೆ ತಾಲ್ಲೂಕು ಎಲೆರಾಂಪುರದ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಹನುಮಂತನಾಥ ಸ್ವಾಮೀಜಿ, ಮೈಸೂರಿನ ಮದ್ಗರಲಿಂಗಯ್ಯನ ಹುಂಡಿ ವಿರಕ್ತಮಠದ ಗೌರಿಶಂಕರ ಸ್ವಾಮೀಜಿ ವಹಿಸಿದ್ದರು. ಬೆಂಗಳೂರು ಹಾಲು ಒಕ್ಕೂಟ(ಬಮೂಲ್)ದ ನಿರ್ದೇಶಕ ಸತೀಶ್ ಕಡತನಮಲೆ, ಬಿಜೆಪಿ ಮುಖಂಡ ಎಚ್.ಬಿ. ಹನುಮಯ್ಯ, ದಕ್ಷಿಣ ಕಾಳಿಕಾದೇವಿ ದೇವಾಲಯದ ಧರ್ಮದರ್ಶಿಗಳು, ಕಟ್ಟೆಮನೆ ಚಾರಿಟಬಲ್ ಟ್ರಸ್ಟ್‌ನ‌ ಅಧ್ಯಕ್ಷ ಅರುಣ್ ಗುರೂಜಿ, ಸಮಾಜ ಸೇವಕ ರಮೇಶ್, ದಾನಿ ಅಣ್ಣಾದೊರೈ, ಅರಕೆರೆ ಗ್ರಾಮ ಪಂ‌ಚಾಯಿತಿ ಮಾಜಿ ಅಧ್ಯಕ್ಷ ಕೆ.ಆರ್. ತಿಮ್ಮೇಗೌಡ, ಮುಖಂಡರಾದ ಐವರಕಂಡಪುರ ಅಜಯ್ ಕುಮಾರ್, ಕೆ.ಸಿ. ಬಾಬು, ಆವಲಹಳ್ಳಿ ಗಿರೀಶ್, ನಂಜುಂಡೇಗೌಡ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.