ದೊಡ್ಡಬಳ್ಳಾಪುರ: ಪರಿಸರ ಸ್ನೇಹಿ ಗಣಪತಿ ಪೂಜಿಸಲು ಉತ್ತೇಜಿಸುವ ಸಲುವಾಗಿ ನಾಗದಳ ಹಾಗೂ ಯುವ ಸಂಚಲನ ವತಿಯಿಂದ ಮಣ್ಣಿನ ಗಣಪತಿ ತಯಾರಿಕಾ ಕಾರ್ಯಾಗಾರ ನಗರದ ಎಲೇಪೇಟೆ ಸರ್ಕಾರಿ ಶಾಲೆಯಲ್ಲಿ ಭಾನುವಾರ ನಡೆಯಿತು.
ದೇವನಹಳ್ಳಿ ಆಚಾರ್ಯ ಶಿಲ್ಪಕಲಾ ಶಾಲೆ ಕಲಾವಿದ ಶಂಕರ್ ಹಾಗೂ ತುಮಕೂರಿನ ಕಲಾವಿದ ಪ್ರಕಾಶ್ ಅವರು ಮಕ್ಕಳಿಗೆ ಗಣೇಶ ಮೂರ್ತಿಗಳ ತಯಾರಿಕೆ ತಿಳಿಸಿಕೊಟ್ಟರು.
ನಾಗದಳದ ಸಂಚಾಲಕ ಸುಂ.ಸು.ಬದರೀನಾಥ ಮಾತನಾಡಿ, ಪ್ರಕೃತಿಯೇ ದೇವರೆಂಬ ಮಾತಿದೆ. ಆದರೆ, ದೇವರ ಹೆಸರಲ್ಲಿ ಪ್ರಕೃತಿ ನಾಶಗೊಳಿಸುತ್ತಿದ್ದೇವೆ ಎಂದರು.
ವಲಯ ಅರಣ್ಯಾಧಿಕಾರಿ ನಟರಾಜ್, ನಾಗದಳ ಸಂಚಾಲಕ ಎನ್.ಭಾಸ್ಕರ್, ಸಿ.ನಟರಾಜ್, ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.