ADVERTISEMENT

ಮುಂಬೈ–ಬೆಂಗಳೂರು ಹೆದ್ದಾರಿಯಲ್ಲಿ ಅಪಘಾತ: ಕಿಲೋಮೀಟರ್‌ ಗಟ್ಟಲೇ ನಿಂತ ವಾಹನಗಳು

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2021, 1:39 IST
Last Updated 18 ಮಾರ್ಚ್ 2021, 1:39 IST
ಕಿಲೋಮೀಟರ್‌ ಗಟ್ಟಲೇ ನಿಂತ ವಾಹನಗಳು
ಕಿಲೋಮೀಟರ್‌ ಗಟ್ಟಲೇ ನಿಂತ ವಾಹನಗಳು   

ಬೆಂಗಳೂರು: ಮುಂಬೈ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಬೆಳಗ್ಗೆ ಅಪಘಾತ ಸಂಭವಿಸಿದ್ದು ರಸ್ತೆಯಲ್ಲಿ ಕಿಲೋಮೀಟರ್ ಗಟ್ಟಲೇವಾಹನಗಳು ನಿಂತಿವೆ.

ದಾಬಸ್‌ಪೇಟೆ ಸಮೀಪ ಬೆಳಗ್ಗೆ 4 ಗಂಟೆ ಸುಮಾರಿಗೆ ಎರಡು ಲಾರಿಗಳ ಮಧ್ಯೆ ಅಪಘಾತ ಸಂಭವಿಸಿದ್ದು ಲಾರಿಗಳು ರಸ್ತೆಗೆ ಅಡ್ಡವಾಗಿ ಬಿದ್ದಿರುವುದರಿಂದ ಸಂಚಾರ ಬಂದ್‌ ಆಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಬೆಳಗ್ಗೆ 5 ಗಂಟೆ ಸುಮಾರಿಗೆ ತೆರವು ಕಾರ್ಯಾಚರಣೆ ನಡೆಸಲು ಕ್ರೈನ್‌ ಅಪಘಾತ ಸ್ಥಳಕ್ಕೆ ತೆರಳಿದೆ ಎಂದು ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿರುವ ಟ್ರಕ್‌ ಚಾಲಕರು ತಿಳಿಸಿದ್ದಾರೆ.

ADVERTISEMENT

ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಗಳಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿದ್ದು ಸುಮಾರು 8 ರಿಂದ 10 ಕಿ.ಮೀ,ವರೆಗೂ ವಾಹಗಳು ನಿಂತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.