ADVERTISEMENT

ಬೆಂಗಳೂರು: ಕೊಲೆ ಪ್ರಕರಣದ ಆರೋಪಿ ಹತ್ಯೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2020, 6:37 IST
Last Updated 4 ಆಗಸ್ಟ್ 2020, 6:37 IST
ಕೊಲೆಯಾದ ಆರೋಪಿ
ಕೊಲೆಯಾದ ಆರೋಪಿ   

ಬೆಂಗಳೂರು: ಕೊತ್ತನೂರ ಠಾಣೆ ವ್ಯಾಪ್ತಿಯಲ್ಲಿ ಸುರೇಶ್ ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

'ಸ್ಥಳೀಯ ನಿವಾಸಿಯಾದ ಸುರೇಶ್, ಪಶ್ಚಿಮ ವಿಭಾಗ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದರ ಆರೋಪಿ ಆಗಿದ್ದ' ಎಂದು ಈಶಾನ್ಯ ವಿಭಾಗದ ಡಿಸಿಪಿ ಭೀಮಾಶಂಕರ ಗುಳೇದ್ ತಿಳಿಸಿದರು.

'ಭೈರತಿ ಬಂಡೆ ಬಳಿಯೇ ಸುರೇಶ್‌ನನ್ನು ಅಡ್ಡಗಟ್ಟಿದ್ದ ದುಷ್ಕರ್ಮಿಗಳು, ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಿದ್ದಾರೆ.ಹಳೇ ವೈಷಮ್ಯವೇ ಇದಕ್ಕೆ ಕಾರಣವಿರುವ ಅನುಮಾನವಿದೆ. ಆರೋಪಿಗಳಿಗಾಗಿ ವಿಶೇಷ ತಂಡ ಹುಡುಕಾಟ ಆರಂಭಿಸಿದೆ' ಎಂದೂ ಹೇಳಿದರು‌

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.