ರಾಜರಾಜೇಶ್ವರಿನಗರ: ಆರ್.ಆರ್.ನಗರ ವಿಧಾನಸಭಾಕ್ಷೇತ್ರದ ಮತ್ತಿಕೆರೆ ಮಸೀದಿಯ ಮುಂಭಾಗದಲ್ಲಿ ಶುಕ್ರವಾರ ನೂರಾರು ಮುಸ್ಲಿಮರು ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಮಸ್ಜಿದ್-ಎ-ತಾಹಾ ಅಧ್ಯಕ್ಷ ಸಮೀಉಲ್ಲಾಖಾನ್ ನೇತೃತ್ವದಲ್ಲಿ ನಡೆದ ಪ್ರಾರ್ಥನೆಯಲ್ಲಿ, ನೂರಾರು ಮಂದಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಧರ್ಮಗುರು ಮೌಲಾನಾ ಹುಮಾಯನ್ ರಷಾಧಿ, ‘ಶೀಘ್ರ ಮಳೆ ಬರಲಿ, ಇಳೆ ತಂಪಾಗಲಿ’ ಎಂದು ಪ್ರಾರ್ಥಿಸಿದರು.
ಮಸೀದ್-ಎ-ತಾಹಾ ಅಧ್ಯಕ್ಷ ಸಮೀಉಲ್ಲಾಖಾನ್, ‘ನದಿ, ಕೆರೆಕುಂಟೆ, ಮರ-ಗಿಡ, ಕಾಡು, ಬೆಟ್ಟ ಗುಡ್ಡಗಳನ್ನು ಉಳಿಸುವ ಕೆಲಸವಾಗಬೇಕು. ಮಾನವೀಯತೆಯಿಂದ ಇಂತಹ ಕಾರ್ಯಗಳಲ್ಲಿ ಎಲ್ಲರೂ ಭಾಗಿಯಾಗಬೇಕಾಗಿದೆ‘ ಎಂದರು.
ಕರ್ನಾಟಕ ಹಜ್ ಮಂಡಳಿಯ ಸದಸ್ಯ ಜುಲ್ಫಿಕರ್ ಆಹ್ಮದ್‍ಖಾನ್ (ಟಿಪ್ಪು), ಮಸೀದ್-ಎ-ತಾಹಾ ಪದಾಧಿಕಾರಿಗಳಾದ ಅಕ್ರಂ, ಬಾಬು, ದಸ್ತಗೀರ್ ಸಲಿಂ, ಬೈತಾನ್ ಮಾಲ್ ಅಧ್ಯಕ್ಷ ನಜೀರ್, ಕಾರ್ಯದರ್ಶಿ ಚಾಂದ್, ಉಪಾಧ್ಯಕ್ಷ ಅಮೀರ್, ಕೋಶಾಧ್ಯಕ್ಷ ನಾಗಮಂಗಲ ಫೈಯಾಸ್, ಮಹಮದ್ ಫಕೃದ್ದೀನ್ ಸೇರಿ ನೂರಾರು ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.