
ಪ್ರಜಾವಾಣಿ ವಾರ್ತೆ
ಮಕರ ಸಂಕ್ರಾಂತಿ ಹಬ್ಬದ ಕಬ್ಬು, ಎಳ್ಳು ಬೆಲ್ಲ
–ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ಬೆಂಗಳೂರು: ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಬರುವ ದೇವಸ್ಥಾನಗಳಲ್ಲಿ ಭಕ್ತರಿಗೆ ಮಕರ ಸಂಕ್ರಾಂತಿಯ ಪ್ರಯುಕ್ತ ಎಳ್ಳು–ಬೆಲ್ಲ ವಿತರಿಸಬೇಕು ಎಂದು ಇಲಾಖೆಯು ಸುತ್ತೋಲೆ ಹೊರಡಿಸಿದೆ.
ಪ್ರತಿ ವರ್ಷ ಮಕರ ಸಂಕ್ರಾಂತಿ ಹಬ್ಬದ ದಿನ ಆಯಾ ದೇವಾಲಯಗಳಲ್ಲಿ ಎಳ್ಳು–ಬೆಲ್ಲ ಕೊಬ್ಬರಿ ಮಿಶ್ರಣವನ್ನು ದೇವರ ಮುಂದೆ ಇಟ್ಟು ನಿವೇದಿಸಿ ಭಕ್ತರಿಗೆ ಗೌರವಪೂರ್ವಕವಾಗಿ ಪ್ರಸಾದ ರೂಪದಲ್ಲಿ ನೀಡಬೇಕು. ಅದು ಸರ್ಕಾರದ ಲಾಂಛನದೊಂದಿಗೆ ದೇವಸ್ಥಾನದ ಹೆಸರು ಮುದ್ರಿಸಿದ ಕಾಗದದ ಲಕೋಟೆಗಳಲ್ಲಿ ಕನಿಷ್ಠ 50 ಗ್ರಾಂನಷ್ಟು ನೀಡಬೇಕು. ಅದಕ್ಕೆ ತಗಲುವ ವೆಚ್ಚವನ್ನು ಆಯಾ ದೇವಾಲಯದ ನಿಧಿಯಿಂದ ನಿಯಮಾನುಸಾರ ಭರಿಸಬೇಕು ಎಂದು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.