ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 22:25 IST
Last Updated 31 ಜನವರಿ 2026, 22:25 IST
<div class="paragraphs"><p>ನಗರದಲ್ಲಿ ಇಂದು</p></div>

ನಗರದಲ್ಲಿ ಇಂದು

   

ಅಗ್ರಿವಾಕ್: ರೈತರ ಸಬಲೀಕರಣಕ್ಕಾಗಿ ಒಂದು ನಡೆ, ಆಯೋಜನೆ: ಕೃಷಿ ಇಲಾಖೆ, ಸ್ಥಳ: ಬ್ಯಾಂಡ್‌ಸ್ಟ್ಯಾಂಡ್, ಕಬ್ಬನ್ ಉದ್ಯಾನ, ಬೆಳಿಗ್ಗೆ 6.30

ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಸರಸ್ವತಿ ಉಪಾಸನೆ: ಎಸ್‌.ಆರ್. ವಾದಿರಾಜ್ ಆಚಾರ್, ಆಯೋಜನೆ ಹಾಗೂ ಸ್ಥಳ: ಶ್ರೀವಜ್ರ ಕ್ಷೇತ್ರ, 151, 7ನೆ ಅಡ್ಡ ರಸ್ತೆ, 3ನೆ ಬ್ಲಾಕ್‌, ತ್ಯಾಗರಾಜನಗರ, ಬೆಳಿಗ್ಗೆ 7ರಿಂದ

ADVERTISEMENT

ಜಿನಸಹಸ್ರಾಷ್ಟ ನಾಮಾರ್ಚನೆ ಮಹಾಪೂಜೆಯ ಸಮಾರೋಪ ಸಮಾರಂಭ: ಆಯೋಜನೆ: ವಿಶ್ವಶಾಂತಿ ಯುವಸೇನಾ ಸಮಿತಿ, ಸ್ಥಳ: ರವಿಶಂಕರ ಗುರೂಜಿ ಆಶ್ರಮದ ವೇದ ವಿಜ್ಞಾನ ಮಹಾವಿದ್ಯಾಪೀಠ ಶಾಲೆ ಕ್ರೀಡಾಂಗಣ, ಕನಕಪುರ ರಸ್ತೆ, ಬೆಳಿಗ್ಗೆ 9

ಭಕ್ತಿ ಭಾವಾನಂದ ಅಡಿ ಅಖಂಡ ಭಜನೆ: ಆಯೋಜನೆ ಹಾಗೂ ಸ್ಥಳ: ಸತ್ಯಸಾಯಿ ಆಶ್ರಮ, ಬೃಂದಾವನ, ಕಾಡುಗೋಡಿ, ಬೆಳಿಗ್ಗೆ 9ರಿಂದ

ಹಿಂದೂ ಸಮಾಜೋತ್ಸವ: ಆಶೀರ್ವಚನ: ಆದಿತ್ಯ ಸ್ವಾಮಿ, ದಿಕ್ಸೂಚಿ ಭಾಷಣ: ಶ್ರೀಹರಿ ಶರ್ಮ, ಆಯೋಜನೆ: ಹಿಂದೂ ಸಮಾಜೋತ್ಸವ, ಸ್ಥಳ: ಕಾರ್ಪೊರೇಷನ್ ಶಾಲೆ ಮೈದಾನ, 2ನೇ ಕ್ರಾಸ್, ಮಾಗಡಿ ರಸ್ತೆ, ಬೆಳಿಗ್ಗೆ 9

ಬ್ಯಾರಿ ಕೂಟ: ಉದ್ಘಾಟನೆ: ಸಿದ್ದರಾಮಯ್ಯ ಅಧ್ಯಕ್ಷತೆ: ಶಬೀರ್ ಬ್ರಿಗೇಡ್, ಪ್ರಾಸ್ತಾವಿಕ ಮಾತು: ಯು.ಟಿ. ಖಾದರ್‌, ಆಯೋಜನೆ: ಬ್ಯಾರಿಸ್ ಸೆಂಟ್ರಲ್ ಕಮಿಟಿ, ಸ್ಥಳ: ಅರಮನೆ ಮೈದಾನದ ಶೃಂಗಾರ್ ಪ್ಯಾಲೇಸ್‌, ಬೆಳಿಗ್ಗೆ 10

ಕನ್ನಡ ಉತ್ಸವ: ಉದ್ಘಾಟನೆ: ಅರವಿಂದ ಲಿಂಬಾವಳಿ, ಮಂಜುಳಾ ಅರವಿಂದ ಲಿಂಬಾವಳಿ, ಅಧ್ಯಕ್ಷತೆ: ಸಿ. ಚಂದ್ರಪ್ಪ, ಉಪಸ್ಥಿತಿ: ಸತ್ಯಮಂಗಲ ಮಹದೇವ, ಅಜಿತ್ ಕುಮಾರ್, ಆಶಯ ನುಡಿ: ಎಂ. ಪ್ರಕಾಶಮೂರ್ತಿ, ಆಯೋಜನೆ: ಕನ್ನಡ ಸಾಹಿತ್ಯ ಪರಿಷತ್ತು ಮಹದೇವಪುರ ವಿಧಾನಸಭಾ ಘಟಕ, ಬೆಳಿಗ್ಗೆ 10.30 (ಬೆಳಿಗ್ಗೆ 8 ಗಂಟೆಗೆ ರಾಮಗೊಂಡನಹಳ್ಳಿ ಸರ್ಕಾರಿ ಶಾಲೆಯಿಂದ ವರ್ತೂರು ಕೋಡಿವರೆಗೆ ಕನ್ನಡ ಜಾಗೃತಿ ಮೆರವಣಿಗೆ)

ಸಾಮೂಹಿಕ ಸರಸ್ವತಿ ಪೂಜೆ: ಆಯೋಜನೆ: ನಂಜನಗೂಡು ಶ್ರೀಕಂಠೇಶ್ವರ ಸೇವಾ ಸಂಘ, ಸ್ಥಳ: ಶ್ರೀಕಂಠೇಶ್ವರ ಭವನ, ಮಲ್ಲೇಶ್ವರ, ಬೆಳಿಗ್ಗೆ 10.30

‘ಕಾರ್ಮಿಕ ಸಂಹಿತೆಗಳು’ ಮೋದಿ ಕಟ್ಟುತ್ತಿರುವ ಸುಳ್ಳುಗಳ ಅನಾವರಣ: ನಾಲ್ಕು ಕಾರ್ಮಿಕ ಸಂಹಿತೆಗಳ ವಿಶ್ಲೇಷಣೆ, ಅತಿಥಿ: ವಿ. ಗೋಪಾಲಗೌಡ, ಆಯೋಜನೆ: ಎಐಸಿಸಿಟಿಯು, ಸ್ಥಳ: ಗಾಂಧಿ ಭವನ, ಕುಮಾರಕೃಪ ರಸ್ತೆ, ಬೆಳಿಗ್ಗೆ 10.30

ದತ್ತಿ ಉಪನ್ಯಾಸ: ‘ಅಭಿಜ್ಞಾನ ಶಾಕುಂತಲ ಕಾವ್ಯದಲ್ಲಿ ಶಾಕುಂತಲ ಮತ್ತು ದುಷ್ಯಂತನ ಪಾತ್ರಗಳು: ಭಾರತೀಯ ಮುಂಗಾರು ಮಳೆಯ ಒಂದು ರೂಪಕದ ವಿಸಂಕೇತ’ ವಿಷಯದ ಬಗ್ಗೆ ಉಪನ್ಯಾಸ: ಶಶಿಧರ ಚಿಕ್ಕ, ‘ಹೊಯ್ಸಳ ದೇವಾಲಯಗಳು ಮತ್ತು ಅವುಗಳ ಸಂರಕ್ಷಣೆ’ ವಿಷಯದ ಬಗ್ಗೆ ಉಪನ್ಯಾಸ: ಎಚ್.ಜಿ. ಶಶಿಧರ್, ಆಯೋಜನೆ ಹಾಗೂ ಸ್ಥಳ: ದಿ ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ, ಬೆಳಿಗ್ಗೆ 11

ಗುರು ಸಿದ್ದರಾಮೇಶ್ವರ ಅವರ 854ನೇ ಜಯಂತಿ: ಉದ್ಘಾಟನೆ: ಎಲ್. ರವಿಸುಬ್ರಮಣ್ಯ, ಅಧ್ಯಕ್ಷತೆ: ನಂಜಪ್ಪ ಭೋವಿ, ಅತಿಥಿ: ಶರಣ ಬಂಗಾರಸ್ವಾಮಿ, ಕವಿ ಸ್ವಾಮಿ, ಕೃಷ್ಣಪ್ಪ ಸ್ವಾಮೀಜಿ, ಚಂದ್ರಶೇಖರ ಸ್ವಾಮೀಜಿ, ಆಯೋಜನೆ: ಭೋವಿ ಜನಾಂಗ ಒಕ್ಕೂಟ, ಸ್ಥಳ: ಆಲದ ಮರದ ತಿಮ್ಮಪ್ಪ ಆವರಣ, ಗವಿಗಂಗಾಧರೇಶ್ವರ ದೇವಸ್ಥಾನದ ಹತ್ತಿರ, ಕೆ.ಜಿ.ನಗರ, ಬೆಳಿಗ್ಗೆ 11

ಮಾಸದ ಮಂಥನ: ‘ಬದುಕು–ಬರಹ, ಪ್ರೇರಕ–ಪೂರಕ’ ವಿಷಯದ ಬಗ್ಗೆ ಸಂವಾದ: ಎ.ಆರ್. ಮಣಿಕಾಂತ್, ಸ್ಥಳ: ನಂ.17, ಸಾನಿಧ್ಯ, 1ನೇ ಅಡ್ಡರಸ್ತೆ, ದೊಡ್ಡಕನ್ನೆಲ್ಲಿ, ಬೆಳಿಗ್ಗೆ 11

ಅವ್ವ ನುಡಿ ಉತ್ಸವ: 12 ಪುಸ್ತಕಗಳು ಬಿಡುಗಡೆ ಹಾಗೂ ಅವ್ವ ಪ್ರಶಸ್ತಿಗಳ ಪ್ರದಾನ ಸಮಾರಂಭ: ಅತಿಥಿ: ರಾಗಂ, ವೀರಕಪುತ್ರ ಶ್ರೀನಿವಾಸ, ಎಸ್.ಎಸ್. ಸತ್ಯನಾರಾಯಣ, ಸ್ಥಳ: ಕೃಷ್ಣರಾಜ ಪರಿಷತ್ತು ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಮಧ್ಯಾಹ್ನ 3

‘ಸಮ್ಮಿಲನ’ ಶರೀಫ ನಮನ: ಅತಿಥಿ: ಶ್ರೀಧರ್, ಸನ್ಮಾನ: ಸದ್ಯೋಜಾತ ಭಟ್ಟ, ವಾದ್ಯ ಸಹಕಾರ: ಸಂಗೀತ್ ಥಾಮಸ್, ಗುರುರಾಜ್, ಶೌರಿ ಶಾನಭೋಗ್, ಸಂತೋಷ್ ಹೆಗಡೆ, ನಿರಂಜನ್ ಹೆಗಡೆ, ಸುಬ್ರಹ್ಮಣ್ಯ ಹೆಗಡೆ, ಆಯೋಜನೆ: ಶ್ರೀ ಮ್ಯೂಸಿಕ್ ಅಕಾಡೆಮಿ, ಸ್ಥಳ: ಶಂಕರ ಫೌಂಡೇಷನ್, ಕನಕಪುರ ರಸ್ತೆ, ಮಧ್ಯಾಹ್ನ 3.30

‘ತುಕಾರಾಮ್ ಹೇಳೆ ಕಬೀರ’ ಶೀರ್ಷಿಕೆಯಡಿ ಸಂಗೀತ ಸಂವಾದ: ಜಯತೀರ್ಥ ಮೇವುಂಡಿ, ಭುವನೇಶ್ ಕೋಮಕಲಿ, ಧನಶ್ರೀ ಲೇಲೆ, ಆಯೋಜನೆ: ಪಂಚಮ್ ನಿಷಾದ್ ಸಂಸ್ಥೆ, ಸ್ಥಳ: ಚೌಡಯ್ಯ ಸ್ಮಾರಕ ಭವನ, ಸಂಜೆ 5.30

61ನೇ ನಾದಜ್ಯೋತಿ ಸಂಗೀತ ಸಂಭ್ರಮ: ಪಂಚವೇಣುವಾದನ: ಎಚ್.ಎಸ್. ವೇಣುಗೋಪಾಲ್, ಎಂ.ಎಸ್. ಪ್ರಮುಖ್, ಅಪ್ರಮೇಯ ಶೇಷಾದ್ರಿ, ಸುಹಾಸ್ ಮುರುಳಿ, ಅಚ್ಯುತ್ ಎಂ. ಅತ್ರೇಯ, ಪಿಟೀಲು: ಆರ್. ರಘುರಾಮ್, ಮೃದಂಗ: ಜಿ. ಅರವಿಂದ್, ಖಂಜೀರ: ಆರ್. ಹರೀಶ್ ಚಂದ್ರ, ಪ್ರಶಸ್ತಿ ಪ್ರದಾನ ಸಮಾರಂಭ: ಅತಿಥಿಗಳು: ವೂಡೇ ಪಿ. ಕೃಷ್ಣ, ಎಸ್. ಸೂರ್ಯಪ್ರಕಾಶ್ ಪಂಡಿತ್, ಪ್ರಶಸ್ತಿ ಪುರಸ್ಕೃತರು: ಸಿ. ರಾಮದಾಸ್, ಎಚ್.ಎಸ್. ವೇಣುಗೋಪಾಲ್, ಬಿ.ಎಸ್. ಪ್ರಶಾಂತ್,
ಆಯೋಜನೆ: ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್, ಸ್ಥಳ: ಶ್ರೀರಾಮ ಮಂದಿರ, ಈಸ್ಟ್‌ ಪಾರ್ಕ್‌ ರಸ್ತೆ, ಮಲ್ಲೇಶ್ವರ, ಸಂಜೆ 4.15ರಿಂದ (ಪ್ರಶಸ್ತಿ ಪ್ರದಾನ ಸಮಾರಂಭ ಸಂಜೆ 6.15ಕ್ಕೆ)

ದಕ್ಷಿಣಾಸ್ಯ ದರ್ಶಿನೀ ಸಮಾರೋಪ ಸಮಾರಂಭ: ಅತಿಥಿಗಳು: ಎಸ್. ಸೋಮನಾಥ್, ಪ್ರಹ್ಲಾದ್ ರಾಮರಾವ್, ಆಯೋಜನೆ: ವೇದಾಂತ ಭಾರತಿ, ಸ್ಥಳ: ತ್ರಿಪುರವಾಸಿನಿ, ಅರಮನೆ ಮೈದಾನ, ಸಂಜೆ 4.30

ವಾರ್ಷಿಕ ವಸಂತ ಸಂಗೀತ ಉತ್ಸವ: ಕೊಳಲು ಜುಗಲ್‌ಬಂದಿ: ಹೇರಾಂಬ್, ಹೇಮಂತ್, ಪಿಟೀಲು: ಎಲ್. ರಾಮಕೃಷ್ಣನ್, ಮೃದಂಗ: ಬಿ.ಸಿ. ಮಂಜುನಾಥ್, ಖಂಜಿರಾ: ಜಿ. ಗುರುಪ್ರಸನ್ನ,
ಆಯೋಜನೆ: ಶ್ರೀರಾಮ ಲಲಿತಕಲಾ ಮಂದಿರ, ಸ್ಥಳ: ಬೆಂಗಳೂರು ಗಾಯನ ಸಮಾಜ, ಕೆ.ಆರ್. ರಸ್ತೆ, ಸಂಜೆ 5.30

ಪಾವಗಡ ಪ್ರಕಾಶರಾವ್ ಅವರಿಂದ ಕವಿ ಲಕ್ಷ್ಮೀಶರ ‘ಜೈಮಿನಿ ಭಾರತ’ ಉಪನ್ಯಾಸ ಮಾಲಿಕೆ: ಅತಿಥಿಗಳು: ಡಿ.ಆರ್. ಪಾಟೀಲ, ಪಿ.ಎನ್. ರಾಜಾರಾಂ, ಆಯೋಜನೆ: ಡಾ.ಪಾವಗಡ ಪ್ರಕಾಶರಾಯರ ಅಮೃತ ಮಹೋತ್ಸವ ಸಮಿತಿ, ಸ್ಥಳ: ಪತ್ತಿ ಸಭಾಂಗಣ, ಶ್ರೀರಾಮಮಂದಿರ, ಎನ್.ಆರ್. ಕಾಲೊನಿ, ಸಂಜೆ 5.45

ಮಡಿವಾಳ ಮಾಚಿದೇವ ಜಯಂತಿ: ಉದ್ಘಾಟನೆ: ಸಿದ್ದರಾಮಯ್ಯ, ಸಾನ್ನಿಧ್ಯ: ಬಸವ ಮಾಚಿದೇವ ಸ್ವಾಮೀಜಿ, ಮುಕ್ತಾನಂದ ಸ್ವಾಮೀಜಿ, ಉಪಸ್ಥಿತಿ: ಡಿ.ಕೆ. ಶಿವಕುಮಾರ್, ಅಧ್ಯಕ್ಷತೆ: ಶಿವರಾಜ ಎಸ್. ತಂಗಡಗಿ, ಅತಿಥಿ: ಉದಯ್ ಗರುಡಾಚಾರ್, ಉಪನ್ಯಾಸ: ಯಡಿಯೂರು ಮೂಡಲಗಿರಿಯಪ್ಪ, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಸಂಜೆ 6

ಕನಕದಾಸರ ವಿರಚಿತ ‘ಹರಿಭಕ್ತಿಸಾರ’ ಧಾರ್ಮಿಕ ಪ್ರವಚನ: ಧನಂಜಯಾಚಾರ್ಯ,
ಆಯೋಜನೆ ಹಾಗೂ ಸ್ಥಳ: ವಿಜಯ ಮಧ್ವ ಸಂಘ, ಗಂಗಾಧರ ಬಡಾವಣೆ, ವಿಜಯನಗರ 2ನೇ ಹಂತ,
ಸಂಜೆ 6.30

ಬೆಂಗಳೂರು ಪಟ್ಲ ಯಕ್ಷೋತ್ಸವ: ಬೆಳಿಗ್ಗೆ 8.30ರಿಂದ ‘ಹೆಜ್ಜೆ–ಗೆಜ್ಜೆ’ ಶೀರ್ಷಿಕೆಯಡಿ ಮಕ್ಕಳ ಯಕ್ಷಗಾನ ಸ್ಪರ್ಧೆ, ಮಕ್ಕಳಿಗೆ ‘ಯಕ್ಷ ಚಿತ್ರಸಂತೆ’, ಬೆಳಿಗ್ಗೆ 11ರಿಂದ ಉದ್ಘಾಟನಾ ಪರ್ವ: ಡಿ.ಕೆ. ಶಿವಕುಮಾರ್, ಉಮೇಶ್ ಶೆಟ್ಟಿ, ಉದಯ್ ಕುಮಾರ್ ಶೆಟ್ಟಿ, ಉದಯ್ ಹೆಗ್ಡೆ, ಕರುಣಾಕರ ಹೆಗ್ಡೆ, ದಿನೇಶ್ ವೈದ್ಯ, ಪಟ್ಲ ಸತೀಶ್ ಶೆಟ್ಟಿ, ಮಧ್ಯಾಹ್ನ 1ರಿಂದ ಗುರು ಸಂಜೀವ ಸುವರ್ಣ ಅವರ ನಿರ್ದೇಶನದಲ್ಲಿ ಯಕ್ಷ ಬ್ಯಾಲೆ, ಮಧ್ಯಾಹ್ನ 2ರಿಂದ ‘ಕಾಳಿಂಗ–ಕಾಳಿಂಗ’ ಶೀರ್ಷಿಕೆಯಡಿ ಪಿ. ಕಾಳಿಂಗ ರಾವ್–ಕಾಳಿಂಗ ನಾವಡರ ಪದ ಪದ್ಯಗಳ ಅನುರಣನ, ಸಂಜೆ 5ರಿಂದ ಸಮಾರೋಪ ಸಮಾರಂಭ, ಸಂಜೆ 6ಕ್ಕೆ ತೆಂಕು ಬಡಗಿನ ದಿಗ್ಗಜರಿಂದ ‘ಕಟೀಲು ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಪ್ರಸಂಗ, ಆಯೋಜನೆ: ಯಕ್ಷ ಧ್ರುವ ಪಟ್ಲ ಫೌಂಡೇಷನ್‌ ಬೆಂಗಳೂರು ಘಟಕ, ಸ್ಥಳ: ಬಂಟರ ಸಂಘ, ವಿಜಯನಗರ

ಭಾರತ ರಂಗ ಮಹೋತ್ಸವ ಹಾಗೂ ರಂಗ ಪರಿಷೆ: ಮಧ್ಯಾಹ್ನ 3.30ಕ್ಕೆ ರಂಗ ಪರಿಷೆ ಉದ್ಘಾಟನೆ: ಬಿ.ಆರ್. ಪಾಟೀಲ, ಉತ್ಸವ ಗೌರವ: ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಅಧ್ಯಕ್ಷತೆ: ಆರ್. ಮುನಿರತ್ನ, ಅತಿಥಿಗಳು: ಪುರುಷೋತ್ತಮ ಬಿಳಿಮಲೆ, ಶ್ರೀನಿವಾಸ ಕಪ್ಪಣ್ಣ, ಸಂಜೆ 5ಕ್ಕೆ ಭಾರತ ರಂಗ ಮಹೋತ್ಸವ ಉದ್ಘಾಟನೆ: ಬರಗೂರು ರಾಮಚಂದ್ರಪ್ಪ, ಉತ್ಸವ ಗೌರವ: ಉಮಾಶ್ರೀ, ರಂಗಪರಿಷೆ ವಿಶೇಷ ಸಂಚಿಕೆ ಬಿಡುಗಡೆ: ಪ್ರಕಾಶ್ ರಾಜ್, ಅತಿಥಿಗಳು: ಗೊ.ರು. ಚನ್ನಬಸಪ್ಪ, ಕೆ.ಎಂ. ಗಾಯತ್ರಿ, ಕೆ.ಟಿ. ಶಾಂತಲಾ, ಕಾ.ತ. ಚಿಕ್ಕಣ್ಣ, ಎಲ್.ಎನ್. ಮುಕುಂದರಾಜ್, ಅಧ್ಯಕ್ಷತೆ: ಕೆ.ವಿ. ನಾಗರಾಜಮೂರ್ತಿ, ರಾಷ್ಟ್ರೀಯ ನಾಟಕ ಶಾಲೆ ತಂಡದಿಂದ ‘ಬಾಬೂಜಿ’ ನಾಟಕ ಪ್ರದರ್ಶನ, ಆಯೋಜನೆ: ಕರ್ನಾಟಕ ನಾಟಕ ಅಕಾಡೆಮಿ, ರಾಷ್ಟ್ರೀಯ ನಾಟಕ ಶಾಲೆ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ

ದಾಸ ನಿರಂತರ ಸಂಗೀತೋತ್ಸವ ಹಾಗೂ ಪಂ.ಆರ್.ವಿ. ಶೇಷಾದ್ರಿ ಗವಾಯಿ ಪ್ರಶಸ್ತಿ ಪ್ರದಾನ: ಸಂತೋಷ್ ಹೆಗ್ಡೆ, ಉದ್ಘಾಟನೆ; ಶ್ರೀನಿವಾಸ ಪ್ರಭು, ಪುಸ್ತಕ ಬಿಡುಗಡೆ: ರಂಜನಿ, ಅತಿಥಿಗಳು: ಪೂರ್ಣಾ ಆಚಾರ್ಯ, ಶೈಲೇಂದ್ರ ಶರ್ಮಾ, ಅಶ್ವಿನ್ ಬಾಳಿಗಾ, ಪ್ರಶಸ್ತಿ ಪುರಸ್ಕೃತರು: ವಾಗೀಶ್ ಭಟ್, ಆಯೋಜನೆ: ಸತೀಶ್ ಹಂಪಿಹೊಳಿ ಮ್ಯೂಸಿಕ್ ಫೌಂಡೇಷನ್, ಸ್ಥಳ: ಜೆಎಸ್ಎಸ್ ಸಭಾಂಗಣ, ಜಯನಗರ 8ನೇ ಬ್ಲಾಕ್, ಬೆಳಿಗ್ಗೆ 9.30ರಿಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.