ADVERTISEMENT

ಬೆಂಗಳೂರು ಮೆಟ್ರೊ ಪ್ರಯಾಣಿಕರಿಗೆ ಠೇವಣಿ ರಹಿತ ಕ್ಯೂಆರ್ ಪಾಸ್‌

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 1:30 IST
Last Updated 14 ಜನವರಿ 2026, 1:30 IST
<div class="paragraphs"><p>ನಮ್ಮ ಮೆಟ್ರೊ </p></div>

ನಮ್ಮ ಮೆಟ್ರೊ

   

ಬೆಂಗಳೂರು: ನಮ್ಮ ಮೆಟ್ರೊದಲ್ಲಿ ಅನಿಯಮಿತವಾಗಿ ಪ್ರಯಾಣಿಸುವವರು ಸ್ಮಾರ್ಟ್‌ ಕಾರ್ಡ್‌ಗೆ ಭದ್ರತಾ ಠೇವಣಿ ಇಡುವುದರ ಬದಲು ಇನ್ನು ಮುಂದೆ ಠೇವಣಿ ಹೊರೆ ಇಲ್ಲದ ಕ್ಯೂಆರ್ ಕೋಡ್‌ ಆಧಾರಿತ ‌ಪಾಸ್‌ ಬಳಸಬಹುದು.

ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ(ಬಿಎಂಆರ್‌ಸಿಎಲ್) ಮೊಬೈಲ್ ಕ್ಯೂಆರ್ ಆಧಾರಿತ 1, 3 ಮತ್ತು 5 ದಿನಗಳ ಪ್ರಯಾಣದ ಪಾಸ್‌ ಅನ್ನು ಪರಿಚಯಿಸಿದೆ. ಜ.15ರಿಂದ ಇದು ಜಾರಿಗೆ ಬರಲಿದೆ. 1 ದಿನದ ಪಾಸ್‌ ₹250, 3 ದಿನದ ಪಾಸ್‌ ₹550 ಹಾಗೂ 5 ದಿನದ ಪಾಸ್‌ಗೆ ₹850 ದರ ನಿಗದಿ‍ಪಡಿಸಲಾಗಿದೆ. 

ADVERTISEMENT

ಇದುವರೆಗೆ ಅನಿಯಮಿತ ಪ್ರಯಾಣ ಪಾಸ್‌ಗಳು, ಕೇವಲ ಕಾಂಟ್ಯಾಕ್ಟ್‌ಲೆಸ್ ಸ್ಮಾರ್ಟ್ ಕಾರ್ಡ್‌ಗಳ ಮೂಲಕವೇ ಲಭ್ಯವಾಗುತ್ತಿದ್ದು, ₹50 ಭದ್ರತಾ ಠೇವಣಿ ಪಾವತಿಸುವುದು ಕಡ್ಡಾಯವಾಗಿತ್ತು. ಕ್ಯೂಆರ್‌ ಪಾಸ್‌ಗಳು ಮೊಬೈಲ್ ಫೋನ್‌ಗಳಲ್ಲಿ ಡಿಜಿಟಲ್ ರೂಪದಲ್ಲಿ ಲಭ್ಯವಾಗುವುದರಿಂದ ಯಾವುದೇ ಭದ್ರತಾ ಠೇವಣಿ ಪಾವತಿಸುವ ಅಗತ್ಯವಿಲ್ಲ ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

ಪಾಸ್‌ಗಳನ್ನು ನಮ್ಮ ಮೆಟ್ರೊ ಅಧಿಕೃತ ಆ್ಯಪ್ ಮೂಲಕ ಖರೀದಿಸಬಹುದು. ಇತರ ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ಶೀಘ್ರ ಪರಿಚಯಿಸಲಾಗುವುದು. ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ಪ್ರದರ್ಶಿಸಲಾದ ಕೋಡ್ ಸ್ಕ್ಯಾನ್ ಮಾಡಿ ಪ್ರವೇಶ ಮತ್ತು ನಿರ್ಗಮನ ಆಗಬಹುದು ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.