ಬೆಂಗಳೂರು: ‘ನಮ್ಮ ಮೆಟ್ರೊ’ ಹಳದಿ ಮಾರ್ಗಕ್ಕೆ ಐದನೇ ರೈಲಿನ ಎಲ್ಲ ಆರು ಬೋಗಿಗಳು ಬೆಂಗಳೂರಿಗೆ ತಲುಪಿವೆ. ಅಕ್ಟೋಬರ್ ಕೊನೇ ವಾರದಲ್ಲಿ ಐದನೇ ರೈಲಿನ ಸಂಚಾರ ಆರಂಭವಾಗಲಿದೆ.
ಹೆಬ್ಬಗೋಡಿ ಡಿಪೊದಲ್ಲಿ ಆರು ಬೋಗಿಗಳನ್ನು ಜೋಡಿಸಿದ ಬಳಿಕ ಇನ್‌ಸ್ಪೆಕ್ಷನ್ ಬೇ ಲೈನ್‌ನಲ್ಲಿ ಆರಂಭಿಕ ಪರೀಕ್ಷೆಗಳು ನಡೆಯಲಿವೆ. ಆ ನಂತರ ಎರಡು ವಾರ ರಾತ್ರಿ ವೇಳೆಯಲ್ಲಿ ವಾಣಿಜ್ಯ ಮಾರ್ಗದಲ್ಲಿ ಪರೀಕ್ಷಾ ಸಂಚಾರ ನಡೆಯಲಿದೆ.
ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಜೆ. ರವಿಶಂಕರ್ ಅವರು ಶುಕ್ರವಾರ ಬೋಗಿಗಳನ್ನು ವೀಕ್ಷಿಸಿ ಅಧಿಕಾರಿಗಳಿಂದ ವಿವರ ಪಡೆದರು. ಐದನೇ ರೈಲು ಸಂಚಾರ ಆರಂಭಗೊಂಡಾಗ ಹಳದಿ ಮಾರ್ಗದಲ್ಲಿ ಪ್ರತಿ ಟ್ರಿಪ್‌ನ ಅಂತರ 15 ನಿಮಿಷಕ್ಕೆ ಇಳಿಯಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.