
ಪ್ರಜಾವಾಣಿ ವಾರ್ತೆ
ಬೆಂಗಳೂರು: ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಗೌರವ ಸಮರ್ಪಿಸಲು ಸೂತ್ರ ಫಿಟ್ನೆಸ್ ಸಂಸ್ಥೆಯು ಡಾ.ಪುನೀತ್ ರಾಜ್‌ಕುಮಾರ್ ಚಾರಿಟೆಬಲ್ ಟ್ರಸ್ಟ್ ಸಹಯೋಗದಲ್ಲಿ ಮಾರ್ಚ್ 15ರಂದು ನೈಸ್ ರಸ್ತೆಯಲ್ಲಿ ‘ನಮ್ಮ ಪವರ್ ರನ್’ ಹಮ್ಮಿಕೊಂಡಿದೆ.
ಇದು ನಾಲ್ಕನೇ ಆವೃತ್ತಿಯಾಗಿದ್ದು, 5ಕೆ, 10ಕೆ ಮತ್ತು 21.1ಕೆ ವಿಭಾಗವಾರು ಓಟ ನಡೆಯಲಿದೆ. ಹೊಸಕೆರೆಹಳ್ಳಿ ಟೋಲ್ ಜಂಕ್ಷನ್‌ನಿಂದ ಈ ಓಟಗಳು ಪ್ರಾರಂಭವಾಗಲಿವೆ. ನೋಂದಣಿ ಮಾಡಿಕೊಂಡವರಿಗೆ ಮಾತ್ರ ಈ ಓಟದಲ್ಲಿ ಪಾಲ್ಗೊಳ್ಳಲು ಅವಕಾಶ ಇರಲಿದೆ. ‘ನಿಮ್ಮ ಆರೋಗ್ಯವೇ ಶಕ್ತಿ’ ಎಂಬ ಶೀರ್ಷಿಕೆಯಡಿ ಈ ಓಟ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ನೋಂದಣಿಗೆ: nammapowerrun.com
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.