
ಬೆಂಗಳೂರು: ನಾರಾಯಣ ಗ್ರೂಪ್ ವತಿಯಿಂದ ‘ರಂಗಮಂಚ್–2025’ ವಾರ್ಷಿಕೋತ್ಸವ, ನೀಟ್‌ನಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವಸಂತನಗರದಲ್ಲಿರುವ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ, ಹೃದಯಸ್ಪರ್ಶಿ ಭಾಷಣಗಳು ಹಾಗೂ ಸಾಧಕರ ಮಾತುಗಳು ಸಮಾರಂಭದ ಮೆರುಗು ಹೆಚ್ಚಿಸಿತು.
ನಾರಾಯಣ ನೀಟ್ ಅಕಾಡೆಮಿಯ 164 ವಿದ್ಯಾರ್ಥಿಗಳು ದೇಶದ ವಿವಿಧ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ನೋಂದಣಿಯಾದವರಲ್ಲಿ ಶೇಕಡ 50ಕ್ಕೂ ಅಧಿಕ ವಿದ್ಯಾರ್ಥಿಗಳು ಅಗ್ರ ವೈದ್ಯಕೀಯ ಸಂಸ್ಥೆಗಳಲ್ಲಿ ಪ್ರವೇಶ ಪಡೆದಿರುವುದು ಸಂಸ್ಥೆಗೆ ಕೀರ್ತಿ ಹೆಚ್ಚಿಸಿದೆ. ಇದೇ ವೇಳೆ ಸಾಧಕರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ನಾರಾಯಣ ಶೈಕ್ಷಣಿಕ ಸಂಸ್ಥೆಗಳ ನಿರ್ದೇಶಕರಾದ ಡಾ.ಪಿ. ಸಿಂಧೂರ ಮಾತನಾಡಿ, ‘ರಂಗಮಂಚ್ ಎಂಬುದು ಕೇವಲ ರ‍್ಯಾಂಕ್ ವಿಜೇತರ ಸಂಭ್ರಮವಲ್ಲ. ಇದು ಕನಸುಗಳ, ಸಾಧನೆಗಾಗಿ ಹೋರಾಟದ, ಪ್ರತಿಯೊಬ್ಬರಲ್ಲೂ ಸಾಮರ್ಥ್ಯ ಅಡಗಿದೆ ಎಂಬ ನಂಬಿಕೆಯ ಸಂಭ್ರಮ. ಕುವೆಂಪು ಭವನ ಕ್ಯಾಂಪಸ್‌ನ 164 ವಿದ್ಯಾರ್ಥಿಗಳ ಸಾಧನೆ, ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಮತ್ತು ಸಂಸ್ಥೆಯ ಬದ್ಧತೆಯ ಪ್ರತಿಫಲವಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.