ADVERTISEMENT

ನಾಸಾ ಸ್ಪೇಸ್‌ ಆ್ಯಪ್‌ ಚಾಲೇಂಜ್‌ 2018 ಹ್ಯಾಕಥಾನ್‌

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2018, 19:18 IST
Last Updated 19 ಅಕ್ಟೋಬರ್ 2018, 19:18 IST
   

ಬೆಂಗಳೂರು: ದಯಾನಂದ ಸಾಗರ ವಿಶ್ವವಿದ್ಯಾಲಯದಲ್ಲಿ ಇದೇ 20 ಮತ್ತು 21ರಂದು ನಾಸಾ ಸ್ಪೇಸ್‌ ಆ್ಯಪ್‌ ಚಾಲೆಂಜ್‌ 2018 ಹ್ಯಾಕಥಾನ್‌ನಡೆಯಲಿದೆ.

ನಾಸಾ ಸಂಸ್ಥೆಯು ಪ್ರಪಂಚದ 200 ನಗರಗಳಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಿದೆ. ಆರು ವಿಭಾಗಗಳಲ್ಲಿ 25 ತಾಂತ್ರಿಕ ಸವಾಲುಗಳನ್ನು ಸ್ಪರ್ಧಿಗಳಿಗೆ ನೀಡಲಾಗುತ್ತದೆ. ಆಸಕ್ತರು ಉಚಿತವಾಗಿ ಹೆಸರನ್ನು ನೋಂದಾಯಿಸಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.

ಇಲ್ಲಿ ವಿಜೇತರಾಗುವ 2 ತಂಡಗಳು ಜಾಗತಿಕ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆಯಲಿವೆ. ಅಲ್ಲಿಯೂ ಗೆದ್ದವರು ಯುಎಸ್‌ಎ ಕೆನಡಿ ಬಾಹ್ಯಾಕಾಶ ಕೇಂದ್ರಕ್ಕೆ ಭೇಟಿ ನೀಡುವ ಅವಕಾಶ ಗಳಿಸುತ್ತಾರೆ.

ADVERTISEMENT

ವಿಜೇತರು ಸೂಚಿಸುವ ತಾಂತ್ರಿಕ ಪರಿಹಾರೋಪಾಯಗಳನ್ನು ನಾಸಾ ತನ್ನ ಸುಧಾರಿತ ತಂತ್ರಾಂಶಗಳಲ್ಲಿ ಅಳವಡಿಸಿಕೊಳ್ಳಲಿದೆ ಎಂದು ವಿಶ್ವವಿದ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಮಾಹಿತಿಗೆ:https://2018.spaceappschallenge.org/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.