ಬೆಂಗಳೂರು: ನಗರದ ಆರ್ಟ್ ಆಫ್ ಲಿವಿಂಗ್ ಅಂತರರಾಷ್ಟ್ರೀಯ ಕೇಂದ್ರದಲ್ಲಿ ನವರಾತ್ರಿ ಹಬ್ಬವನ್ನು ನಾನಾ ಧಾರ್ಮಿಕ ಚಟುವಟಿಕೆಗಳೊಂದಿಗೆ ಆಚರಿಸಲಾಯಿತು.
ಕೇಂದ್ರದ ಮುಖ್ಯಸ್ಥರಾದ ಶ್ರೀ ಶ್ರೀ ರವಿಶಂಕರ್ ಉಪಸ್ಥಿತಿಯಲ್ಲಿ 180 ದೇಶಗಳಿಂದ ಬಂದಿದ್ದ 2.5 ಲಕ್ಷಕ್ಕೂ ಹೆಚ್ಚು ಭಕ್ತರು ಜಗನ್ಮಾತೆಯ ಆರಾಧನೆ ಮಾಡಿದರು.
ಅಷ್ಟಮಿಯಂದು ಶತ ಚಂಡಿ ಹೋಮ ನಡೆಯಿತು. 700 ಶ್ಲೋಕಗಳ ದುರ್ಗಾ ಸಪ್ತಶತಿಯನ್ನು ಪಠಿಸಲಾಯಿತು. ಈ ವರ್ಷ, ಆರ್ಟ್ ಆಫ್ ಲಿವಿಂಗ್ ವತಿಯಿಂದ ಜಗತ್ತಿನೆಲ್ಲೆಡೆ 137ಕ್ಕೂ ಹೆಚ್ಚು ಸ್ಥಳಗಳಲ್ಲಿ ಚಂಡಿ ಹೋಮ ಆಯೋಜಿಸಲಾಗಿತ್ತು.
ನವಮಿಯಂದು ಋಷಿಗಳು, ಜ್ಞಾನಿಗಳನ್ನು ನೆನೆಯುವ ಋಷಿ ಹೋಮವನ್ನು ನೆರವೇರಿಸಲಾಯಿತು. ಹೋಮಗಳ ನಂತರ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.
ನಮಗೆ ಮೂರು ರೀತಿ ದುಃಖಗಳಿವೆ. ಒಂದು ಹೊರ ಜಗತ್ತಿನಿಂದ ಬಂದರೆ ಮತ್ತೊಂದು ಕರ್ಮಗಳ ರೂಪ. ಮೂರನೆಯದ್ದು ಸೂಕ್ಷ್ಮ ಮನಸ್ಸಿನಿಂದ ಬರುವಂತದ್ದು. ನವರಾತ್ರಿ ಈ ಮೂರರಿಂದಲೂ ನಿರಾಳತೆ ನೀಡುತ್ತದೆ
– ಶ್ರೀ ಶ್ರೀ ರವಿಶಂಕರ್ ಆರ್ಟ್ ಆಫ್ ಲಿವಿಂಗ್
ಗಮನ ಸೆಳೆದ ಕಲೆ ಆರ್ಟ್ ಆಫ್ ಲಿವಿಂಗ್ ನ ಧ್ಯಾನ ಮಂದಿರವು ದೇವಸ್ಥಾನದ ಕಲೆಯಿಂದ ಗಮನ ಸೆಳೆಯಿತು. 18 ಗೋಡೆಗಳ ಮೇಲೆ ಮತ್ತು 36 ಸ್ತಂಭಗಳ ಮೇಲೆ ಸುಮಾರು 15000 ಚದರಡಿಗಳಷ್ಟು ಸ್ಥಳದಲ್ಲಿ ಅಜಂತ ಮತ್ತು ಎಲ್ಲೋರಾದಿಂದ ಸ್ಫೂರ್ತಿ ಪಡೆದ ಮ್ಯೂರಲ್ ಚಿತ್ರಗಳನ್ನು ಬಿಡಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.