ADVERTISEMENT

ಕನ್ನಡ ಸಾಹಿತ್ಯ ಸಮ್ಮೇಳನ ರದ್ದುಗೊಳಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಜನವರಿ 2021, 19:30 IST
Last Updated 2 ಜನವರಿ 2021, 19:30 IST
ನೆಲಮಂಗಲ ತಹಶೀಲ್ದಾರ್ ಶ್ರೀನಿವಾಸ್ ಅವರಿಗೆ ಕನ್ನಡ ಸಾಂಸ್ಕೃತಿಕ ರಂಗದ ಸದಸ್ಯರು ಹಾಗೂ ಪರಿಷತ್ತಿನ ಸದಸ್ಯರು ಮನವಿ ಸಲ್ಲಿಸಿದರು
ನೆಲಮಂಗಲ ತಹಶೀಲ್ದಾರ್ ಶ್ರೀನಿವಾಸ್ ಅವರಿಗೆ ಕನ್ನಡ ಸಾಂಸ್ಕೃತಿಕ ರಂಗದ ಸದಸ್ಯರು ಹಾಗೂ ಪರಿಷತ್ತಿನ ಸದಸ್ಯರು ಮನವಿ ಸಲ್ಲಿಸಿದರು   

ನೆಲಮಂಗಲ: ದೇವನಹಳ್ಳಿ ತಾಲ್ಲೂಕಿನ ವಿಜಯಪುರದಲ್ಲಿ ಜ.3ರಿಂದ ನಡೆಯಲಿ ರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ರದ್ದು ಮಾಡುವಂತೆ ಕನ್ನಡ ಸಾಹಿತ್ಯ ಪರಿಷತ್ತು ಸದಸ್ಯರು ಹಾಗೂ ಕನ್ನಡಪರ ಸಂಘಗಳು ಒತ್ತಾಯಿಸಿವೆ.

ಸಮ್ಮೇಳನ ರದ್ದುಗೊಳಿಸುವಂತೆ ಕೇಂದ್ರ ಸಾಹಿತ್ಯ ಪರಿಷತ್ತು ಮತ್ತು ಜಿಲ್ಲಾಧಿಕಾರಿಗಳಿಗೆತಹಶೀಲ್ದಾರ್ ಮುಖೇನ ಪರಿಷತ್ತಿನ ಸದಸ್ಯರು ಹಾಗೂ ಕನ್ನಡ ಸಾಂಸ್ಕೃತಿಕ ರಂಗದ ಸದಸ್ಯರು ಶನಿವಾರ ಮನವಿ ಸಲ್ಲಿಸಿದರು.

‘ಕಳೆದ ವರ್ಷ ದೊಡ್ಡಬಳ್ಳಾಪುರದಲ್ಲಿ 22ನೇ ಜಿಲ್ಲಾ ಸಮ್ಮೇಳನ ಆಯೋಜಿಸಲಾಗಿತ್ತು. ಸಮ್ಮೇಳನದ ಅಧ್ಯಕ್ಷರಾಗಿತಾ.ನಾ.ಪ್ರಭುದೇವ ಅವರನ್ನು ಆಯ್ಕೆ ಮಾಡಲಾಗಿತ್ತು. ಕಾರಣಾಂತರ ಗಳಿಂದ ಸಮ್ಮೇಳನ ನಡೆಯಲಿಲ್ಲ. 22ನೇ ಸಮ್ಮೇಳನ ನಡೆಯದೇ 23ನೇ ಸಮ್ಮೇಳನ ಆಯೋಜಿಸಿರುವುದು ಸರಿಯಲ್ಲ’ ಎಂದು ಕನ್ನಡ ಸಾಂಸ್ಕೃತಿಕ ರಂಗ ಸಂಸ್ಥೆಯ ‌ಅಧ್ಯಕ್ಷ ಡಿ.ಸಿದ್ದರಾಜು ಆಕ್ಷೇಪ ವ್ಯಕ್ತಪಡಿಸಿದರು.

ADVERTISEMENT

‘ಸಮ್ಮೇಳನದ ಸ್ಥಳ ಬದಲಾವಣೆಗೆ ಆಕ್ಷೇಪವಿಲ್ಲ. ಆದರೆ, ಸಮ್ಮೇಳನದ ಸಂಖ್ಯೆ ಮತ್ತು ಸಮ್ಮೇಳನಾಧ್ಯಕ್ಷರನ್ನು ಅವಮಾನಿಸಿ, ಮತ್ತೊಬ್ಬರನ್ನು ಆಯ್ಕೆ ಮಾಡಿರುವುದು ಸರಿಯಲ್ಲ’ ಎಂದುಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.