ADVERTISEMENT

ಉಚಿತ ಆಂಬುಲೆನ್ಸ್‌ ಸೇವೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 22 ಮೇ 2021, 18:06 IST
Last Updated 22 ಮೇ 2021, 18:06 IST
ಉಚಿತ ಆಂಬುಲೆನ್ಸ್‌ ಸೇವೆಗೆ ವಿಧಾನಪರಿಷತ್‌ ಸದಸ್ಯ ರವಿ ಚಾಲನೆ ನೀಡಿದರು. ಸಪ್ತಗಿರಿ ಶಂಕರ್‌ನಾಯಕ್‌, ಮುಖಂಡರಾದ ಮಿಲ್ಟ್ರಿ ಮೂರ್ತಿ, ಯುವ ಕಾಂಗ್ರೆಸ್‌ನ ನಾರಾಯಣಗೌಡ, ಪುರಸಭೆ ಮಾಜಿ ಅಧ್ಯಕ್ಷ ಆರ್‌.ಉಮಾಶಂಕರ್‌, ಸದಸ್ಯರಾದ ಪುರುಷೋತ್ತಮ, ಪ್ರದೀಪ, ಉಮೇಶ್‌ಗೌಡ ಇದ್ದಾರೆ

ನೆಲಮಂಗಲ: ‘ಕೋವಿಡ್ ತಗುಲಿ ಆಸ್ಪತ್ರೆಗೆ ತಲುಪಲಾಗದೆ, ಚಿಕಿತ್ಸೆ ದೊರೆಯದೆ ಹಲವರು ಪ್ರಾಣ ಕಳೆದುಕೊಂಡಿದ್ದು, ಇದನ್ನರಿತು ಸಪ್ತಗಿರಿ ಶಂಕರ್‌ನಾಯಕ್‌ ಅವರು ಉಚಿತ ಆಂಬುಲೆನ್ಸ್‌ ಸೇವೆ ಆರಂಭಿಸಿದ್ದಾರೆ’ ಎಂದು ವಿಧಾನ ಪರಿಷತ್ತಿನ ಸದಸ್ಯ ರವಿ ತಿಳಿಸಿದರು.

ಉಚಿತ ಆಂಬುಲೆನ್ಸ್‌ ಹಾಗೂ ಸ್ಯಾನಿಟೈಸರ್‌ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ದಿನದ 24 ಗಂಟೆಯೂ ಎರಡು ಆಂಬುಲೆನ್ಸ್‌ಗಳು ಲಭ್ಯ ಇರಲಿವೆ’ ಎಂದರು.

ಕಾಂಗ್ರೆಸ್‌ ಮುಖಂಡ ಸಪ್ತಗಿರಿ ಶಂಕರ್‌ನಾಯಕ್‌ ಮಾತನಾಡಿ, ‘ಒಂದು ಆಂಬುಲೆನ್ಸ್‌ ನೆಲಮಂಗಲ ಪಟ್ಟಣ, ಇನ್ನೊಂದು ದಾಬಸ್‌ಪೇಟೆಯಲ್ಲಿ ಇರಲಿದೆ. ಆಮ್ಲಜನಕ, ತರಬೇತಿ ಪಡೆದ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಯಾವ ಪ್ರದೇಶದಲ್ಲಿ ಸೋಂಕಿತರು ಹೆಚ್ಚಾಗಿದ್ದಾರೊ ಅಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗುವುದು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.