ಬೆಂಗಳೂರು: ನೆಲಮಂಗಲ ನಗರಸಭೆಯ ಅಧ್ಯಕ್ಷೆ ಲತಾ ಹೇಮಂತ್ ಕುಮಾರ್ ಸೇರಿದಂತೆ ಜೆಡಿಎಸ್ ನ 11 ಸದಸ್ಯರು ಶುಕ್ರವಾರ ಕಾಂಗ್ರೆಸ್ ಪಕ್ಷ ಸೇರಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಗೃಹ ಕಚೇರಿಯಲ್ಲಿ ಎಲ್ಲರೂ ಕಾಂಗ್ರೆಸ್ ಸೇರಿದರು. ವಿಧಾನ ಪರಿಷತ್ ನ ಮಾಜಿ ಸದಸ್ಯ ಬೆಮೆಲ್ ಕಾಂತರಾಜು ಮತ್ತು ಕೆಪಿಸಿಸಿ ಸದಸ್ಯ ಎನ್. ಶ್ರೀನಿವಾಸ್ ಉಪಸ್ಥಿತರಿದ್ದರು.
ನೆಲಮಂಗಲ ನಗರಸಭೆಯಲ್ಲಿ ಜೆಡಿಎಸ್ 14 ಸದಸ್ಯರನ್ನು ಹೊಂದಿತ್ತು. 11 ಸದಸ್ಯರ ಪಕ್ಷಾಂತರದೊಂದಿಗೆ ಈಗ ಮೂವರಷ್ಟೇ ಜೆಡಿಎಸ್ ನಲ್ಲಿ ಉಳಿದುಕೊಂಡಿದ್ದಾರೆ. ಇದರೊಂದಿಗೆ ನೆಲಮಂಗಲ ನಗರಸಭೆಯಲ್ಲಿ ಜೆಡಿಎಸ್ ಅಧಿಕಾರ ಕಳೆದುಕೊಂಡಿದೆ.
ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದವರು: ಲತಾ ಹೇಮಂತ್ ಕುಮಾರ್, .ರಾಜಮ್ಮ ಪಿಳ್ಳಪ್ಪ, ಆನಂದ್, ಆಂಜಿನಪ್ಪ, ಅಂಜನಮೂರ್ತಿ( ಪಾಪಣಿ), ದಾಕ್ಷಾಯಿಣಿ ರವಿ ಕುಮಾರ್, ಪ್ರಸಾದ್, ಚೇತನ್, ಪುಷ್ಪಲತಾ ಮಾರೇಗೌಡ, ಭಾರತಿ ಬಾಯಿ ನಾರಾಯಣ್ ರಾವ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.